February 21, 2026

Newsnap Kannada

The World at your finger tips!

leopard , attack ,

ನರಭಕ್ಷಕ ಚಿರತೆ ಗುಂಡಿಕ್ಕಿ ಕೊಲ್ಲಲು ಮೈಸೂರು ಡಿ.ಸಿ ಆದೇಶ

Spread the love

ಟಿ ನರಸೀಪುರ ಸುತ್ತ ಹೆಚ್ಚಾಗಿರುವ ನರಭಕ್ಷಕ ಚಿರತೆಯನ್ನು ಕಂಡಲ್ಲಿ ಗುಂಡಿಕ್ಕಲು ಮೈಸೂರು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಸಚಿವ ಎಸ್.ಟಿ ಸೋಮಶೇಖರ್ ಮಂಗಳವಾರ ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಚಿರತೆ ದಾಳಿಗೆ ಮೃತರಾದ ಕನ್ನನಾಯಕನಹಳ್ಳಿಯ ಸಿದ್ದಮ್ಮ ಹಾಗೂ ಹೊರಳಹಳ್ಳಿಯ ಜಯಂತ್ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಮಾತನಾಡಿದ ಸಚಿವರು ಇಂತಹ ಘಟನೆ ನಡೆಯಬಾರದಿತ್ತು, ನರಭಕ್ಷಕ ಚಿರತೆಯನ್ನು ಕಂಡಲ್ಲಿ ಗುಂಡಿಕ್ಕಲು ಮೈಸೂರು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ ಎಂದು ಸಚಿವ ಎಸ್.ಟಿ ಸೋಮಶೇಖರ್ ಹೇಳಿದರು.

ಜಿಲ್ಲೆಯ ಟಿ.ನರಸೀಪುರ ತಾಲೂಕಿನಲ್ಲಿ ಚಿರತೆ ದಾಳಿಗೆ 11 ವರ್ಷದ ಬಾಲಕ ಸಾವನ್ನಪ್ಪಿದ್ದನು. ಜಯಂತ್ ಮೃತ ಬಾಲಕ ನಾಪತ್ತೆಯಾಗಿದ್ದನು. ಬಳಿಕ ಗ್ರಾಮದ ಹೊರವಲಯದಲ್ಲಿ ರುಂಡವಿಲ್ಲದೆ ಬಾಲಕನ ಶವ ಪತ್ತೆಯಾಗಿದೆ. ರಾತ್ರಿ ಬಾಲಕನನ್ನು ಚಿರತೆ ಹೊತ್ತೊಯ್ದಿತ್ತು.ಇದಲ್ಲದೇ ಇತ್ತೀಚೆಗೆ ಸೌದೆ ತರಲು ಹೋಗಿದ್ದ 60 ವರ್ಷದ ವೃದ್ದೆ ಮೇಲೆ ಕೂಡ ಚಿರತೆ ದಾಳಿ ನಡೆಸಿತ್ತು.

error: Content is protected !!