January 28, 2026

Newsnap Kannada

The World at your finger tips!

vatal

ವೈಭವಯುತ ದಸರಾ ಮಾಡಿ – ವಾಟಾಳ್ ನಾಗರಾಜ್

Spread the love

ನ್ಯೂಸ್ ಸ್ನ್ಯಾಪ್.
ಮೈಸೂರು.

ಕರೋನಾ ಹಿನ್ನಲೆಯಲ್ಲಿ ಈ ವರ್ಷ ಸರಳ ದಸರಾವನ್ನು ಆಚರಿಸಲು ಮುಂದಾಗಿರುವ ಸರ್ಕಾರದ ನಡೆಯನ್ನು ಖಂಡಿಸಿರುವ ವಾಟಾಳ್ ನಾಗರಾಜ್ ವೈಭವಯುತವಾದ ದಸರಾ ಆಚರಣೆಗೆ ಒತ್ತಾಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ದಸರಾಕ್ಕೆ ಅದರದೇ ಆದ ವಿಶೇಷವಿದೆ. ಪ್ರತಿ ವರ್ಷ ಅನೇಕ ಕಲಾವಿದರು ಅನೇಕ ಕಲೆಗಳನ್ನು ಪ್ರದರ್ಶಿಸುತ್ತಾರೆ. ಯಡಿಯೂರಪ್ಪನವೆರೇ, ಇವರಾರು ನಿಮಗೆ ಕಾಣಲಿಲ್ಲವೇ?’ ಎಂದು ಪ್ರಶ್ನೆ ಮಾಡಿದರು.

701564d5 514d 4b5e 97ee 4c1c21689931

‘ಕೇವಲ ಅರಮನೆಯ ಆವರಣದಲ್ಲಿ ಜಂಬೂಸವಾರಿ ಮಾಡಿಸುವುದು ಬೇಡ. ಅರಮನೆಯಿಂದ ಬನ್ನಿ ಮಂಟಪಕ್ಕೆ ಮೆರವಣಿಗೆ ಹೋಗಲಿ.‌ ಪ್ರತಿ ವರ್ಷದಂತೆ ಈ ವರ್ಷವೂ ಕಲೆಗಳ ಪ್ರದರ್ಶನವಾಗಲಿ. ಒಂದು ವೇಳೆ ಕನ್ನಡದ ಕಲಾವಿದರನ್ನು ಬಿಟ್ಟು ಬೇರೆ ಕಲಾವಿದರನ್ನು ಕರೆಸಿದರೆ ಉತ್ಸವದಲ್ಲಿ‌ ನಾನೇ ಖುದ್ದಾಗಿ ಕಪ್ಪು ಬಾವುಟವನ್ನು ಪ್ರದರ್ಶಿಸುತ್ತೇನೆ’ ಎಂದು ಯಡಿಯೂರಪ್ಪನವರಿಗೆ ಎಚ್ಚರಿಕೆ ನೀಡಿದರು

error: Content is protected !!