ಮೈಸೂರು: ಐತಿಹಾಸಿಕ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆ, ಪಂಜಿನ ಕವಾಯತು ವೀಕ್ಷಣೆಗೆ ಇಂದಿನಿಂದ (ಬುಧವಾರ) ಟಿಕೆಟ್ (Tickets) ಮಾರಾಟ ಪ್ರಾರಂಭವಾಗಲಿದೆ. ಇಂದು 10 ಗಂಟೆ ನಂತರ ಟಿಕೆಟ್ ಹಾಗೂ ಗೋಲ್ಡ್ ಕಾರ್ಡ್ ಮಾರಾಟವಾಗಲಿದು, www.mysoredasara.gov.in ಮೂಲಕ ಟಿಕೆಟ್ ಖರೀದಿ ಮಾಡಬಹುದು.
ಯಾವ ಟಿಕೆಟ್‌ಗೆ ಎಷ್ಟು ಬೆಲೆ?
- ಗೋಲ್ಡ್ ಕಾರ್ಡ್ – 6,000 ರೂ.
- ಅರಮನೆ ಎ – 3,000 ರೂ.
- ಅರಮನೆ ಬಿ – 2,000 ರೂ.
- ಪಂಜಿನ ಕವಾಯತು – 500 ರೂ.
ಆನ್‌ಲೈನ್ ಹೊರತುಪಡಿಸಿ ಬೇರೆ ಕಡೆ ಟಿಕೆಟ್ ಮಾರಾಟ ಇಲ್ಲ. ಒಬ್ಬರಿಗೆ 2 ಗೋಲ್ಡ್ ಕಾರ್ಡ್ ಹಾಗೂ ಒಬ್ಬರಿಗೆ 2 ಪಾಸ್ ಖರೀದಿಗೆ ಅವಕಾಶವಿದೆ. ಇದನ್ನು ಓದು – ಯೋಗಾಭ್ಯಾಸ ಆರೋಗ್ಯ ಸಂರಕ್ಷಣೆಗೆ ಸಹಕಾರಿ: ಡಾ.ಹೆಚ್.ಸಿ.ಮಹದೇವಪ್ಪ
ಅರಮನೆ ಆವರಣದಲ್ಲಿ ದಸರಾ ವೀಕ್ಷಣೆಗೆ 3 ಹಾಗೂ 2 ಸಾವಿರ ರೂ. ದರ ನಿಗದಿಯಾಗಿದೆ. ಆನ್ ಲೈನ್ ಮೂಲಕ ಟಿಕೆಟ್ ಖರೀದಿಗೆ ಅವಕಾಶವಿದ್ದು, ಇಂದು ಬೆಳಗ್ಗೆ 10 ಗಂಟೆಗೆ ಟಿಕೆಟ್ ಖರೀದಿಸಬಹುದು. ಮೈಸೂರುದಸರಾ.ಗವ್.ಇನ್ ವೆಬ್ ಸೈಟ್ ಮೂಲಕ ಟಿಕೆಟ್ ಖರೀದಿ ಮಾಡಬಹುದು.
ಟಿಕೆಟ್ ದರ ಭಾರೀ ಏರಿಕೆ
ಈ ಹಿಂದೆ 1,000 ರೂ. ಇದ್ದ ಟಿಕೆಟ್ ಬೆಲೆ ಇದೀಗ ಏಕಾಏಕಿ 2-3 ಸಾವಿರ ರೂ.ಗೆ ಏರಿಕೆಯಾಗಿದೆ. ಗೋಲ್ಡ್ ಕಾರ್ಡ್‌ಗೆ 6,000 ರೂ. ದರ ನಿಗದಿಯಾಗಿದ್ದು, ಪಂಜಿನ ಕವಾಯತು ವೀಕ್ಷಣೆಗೆ 500 ರೂ. ದರ ನಿಗದಿಪಡಿಸಲಾಗಿದೆ.
ದಸರಾ ವೀಕ್ಷಣೆ ದುಬಾರಿ – ಜಂಬೂ ಸವಾರಿ ಟಿಕೆಟ್ ದರ ಭಾರೀ ಏರಿಕೆ – dasara ticket is expensive – Jambo ride ticket price hiked #dasara2023 #mysore
#mysoredasara2023 #mysoredasara #goldenticket #goldenpass #mysore #karnataka #kannanews #goldenmysore
More Stories
₹5.50 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ, ಇಬ್ಬರು ಬಂಧನ
ಮುಡಾ ಹಗರಣ: ಸ್ನೇಹಮಯಿ ಕೃಷ್ಣ ಮತ್ತು ಕೈ ಮುಖಂಡ ಲಕ್ಷ್ಮಣ್ ನಡುವೆ ವಾಗ್ವಾದ
ಆಯೋಧ್ಯೆ ರಾಮಮಂದಿರಕ್ಕೆ ಸ್ಫೋಟದ ಬೆದರಿಕೆ: ಆರ್ಡಿಎಕ್ಸ್ ಬಳಸಿ ಧ್ವಂಸಗೊಳಿಸುವ ಎಚ್ಚರಿಕೆ