ನ್ಯೂಸ್ ಸ್ನ್ಯಾಪ್
ಮೈಸೂರು
ಮೈಸೂರಿನ ಮಹಾರಾಜ, ಜೆಎಸ್ಎಸ್, ಸಂತ ಫಿಲೋಮಿನಾ ಕಾಲೇಜು ಆವರಣದಲ್ಲೇ ಡ್ರಗ್ಸ್ ಸಿಗುತ್ತದೆ.
ಈ ರೀತಿಯಲ್ಲಿ ಗಂಭೀರ ಆರೋಪ ಮಾಡಿದವರು ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ .
‘ಸಾಂಸ್ಕೃತಿಕ ನಗರಿ ಎಂದೇ ಪ್ರಸಿದ್ಧಿ ಪಡೆದ ಮೈಸೂರಿನ ಈ ಎಲ್ಲಾ ಕಾಲೇಜಿಗಳಲ್ಲಿಯೂ ಡ್ರಗ್ಸ್ ದಂಧೆ ನಡೆಯುತ್ತದೆ’ ಎಂದಿದ್ದಾರೆ.
‘ಮೈಸೂರಿನ ಮಹಾಜನ ಕಾಲೇಜು, ಜೆಎಸ್‌ಎಸ್ ದಂತ ಕಾಲೇಜು, ಜೆಎಸ್‌ಎಸ್ ವೈದ್ಯಕೀಯ, ಸಂತ ಫಿಲೋಮಿನಾ ಕಾಲೇಜುಗಳ ಆವರಣದಲ್ಲಿ ಡ್ರಗ್ಸ್ ಸಿಗುತ್ತಿದೆ.
ಇದು ಪಾಲಕರು, ಶಿಕ್ಷಕರಿಗೆ ಗೊತ್ತಿರುವ ವಿಚಾರವೇ. ಆದರೆ ಯಾರೂ ಇದರ ಬಗ್ಗೆ ಪ್ರಶ್ನೆಯನ್ನೇ ಮಾಡುತ್ತಿಲ್ಲ’ ಎಂದು ಹೇಳಿದರು.
‘ಹೊರದೇಶದಿಂದ ಬರುವ ಶ್ರೀಮಂತ ವಿದ್ಯಾರ್ಥಿಗಳು ಲಕ್ಷಾಂತರ ರು ಗಳನ್ನು ಕೊಟ್ಟು ಬರುವುದು ಕಲಿಕೆಗೆ. ಆದರೆ ಇವರು ಮಾಡುತ್ತಿರುವುದು ಡ್ರಗ್ಸ್ ದಂಧೆ. ನೀವು ಇವಾಗ ಬೇಕಾದರೂ ವಿದ್ಯಾರ್ಥಿನಿಲಯಗಳನ್ನು ಪರೀಕ್ಷಿಸಿ. ನಿಮಗೆ ಡ್ರಗ್ಸ್ ಸಿಗುತ್ತದೆ’ ಎಂದು ಸವಾಲೆಸೆದಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ