January 29, 2026

Newsnap Kannada

The World at your finger tips!

prathap simha

ಮೈಸೂರು ವಿಮಾನ ನಿಲ್ದಾಣ ಶೀಘ್ರವೇ ಮೇಲ್ದರ್ಜೆಗೆ – ಸಂಸದ ಪ್ರತಾಪ್

Spread the love

ಮೈಸೂರಿಗೂ ಇನ್ನು ಮುಂದೆ ಅಂತರರಾಷ್ಟ್ರೀಯ ವಿಮಾನಗಳು ಬಂದು ಇಳಿಯುವ, ಇಲ್ಲಿಂದ ಪ್ರಯಾಣ ಮಾಡುವ ಕಾಲ ದೂರ ಉಳಿದಿಲ್ಲ.

ಮೈಸೂರಿನ ಮಂಡಕಳ್ಳಿ ಬಳಿ ಇರುವ ವಿಮಾನ ನಿಲ್ದಾಣವನ್ನು ಶೀಘ್ರವೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಯೋಜನೆಗಳು ರೂಪಗೊಳ್ಳುತ್ತವೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಮೈಸೂರಿನ ಕಡಕೊಳದಲ್ಲಿ ಮಲ್ಟಿ ಮಾಡೆಲ್ ಲಾಜಿಸ್ಟಿಕ್ ಪಾರ್ಕ್ ನಿರ್ಮಾಣದ ಶಂಕುಸ್ಥಾಪನೆ ಕುರಿತಂತೆ ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ನಂತರ ಈ ವಿಷಯ ತಿಳಿಸಿದ ಸಂಸದ ಪ್ರತಾಪ್ ಮೈಸೂರಿನ ಜನ ಆಸೆಯಂತೆ , ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಯೋಜನೆ ಶೀಘ್ರದಲ್ಲೇ ಅನುಷ್ಠಾನಕ್ಕೆ ಬರಲಿದೆ ಎಂದರು.

ಕಳೆದ ಐದು ವರ್ಷದ ಅವಧಿಯಲ್ಲಿ 8 ರೈಲು ಗಳನ್ನು ಮೈಸೂರಿನಿಂದ ಪ್ರಯಾಣಿಸುವ ವ್ಯವಸ್ಥೆ ಮಾಡಿದ್ದೇನೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ ಯಾವಾಗ ಬೇಕಾದರೂ ಅಗತ್ಯವಿರುವ ಕಡೆ ರೈಲು ಸಂಚಾರ ವ್ಯವಸ್ಥೆ ಮಾಡಬಹುದು ಎಂದರು.

ಮೈಸೂರು-ಬೆಂಗಳೂರು ನಡುವೆ 10 ಪಥದ ರಾಷ್ಟೀಯ ಹೆದ್ದಾರಿ ನಿರ್ಮಾಣವಾಗುತ್ತಿದೆ. ಈ ಮೂಲಕ ಕೈಗಾರಿಕಾ ಅಭಿವೃದ್ಧಿ ಮೂಲಕ ಮೈಸೂರಿನಲ್ಲಿ ಹೆಚ್ಚಿನ ಉದ್ಯೋಗವಕಾಶಗಳು ದೊರೆಯುತ್ತಿದೆ. ಉದ್ಯೋಗಕ್ಕಾಗಿ ಬೆಂಗಳೂರಿಗೆ ಹೋಗದೆ ಮೈಸೂರಿನಲ್ಲೆ ಉದ್ಯೋಗ ಸಿಗುವಂತಾಗುತ್ತದೆ ಎಂದು ಪ್ರತಾಪ್ ಸಿಂಹ ಮೈಸೂರಿನ ಅಭಿವೃದ್ಧಿ ಬಗ್ಗೆ ವಿವರಿಸಿದರು.

ಕಡಕೊಳದಲ್ಲಿ ಮಲ್ಟಿ ಲಾಜಿಸ್ಟಿಕ್ ಪಾರ್ಕ್ ನಿರ್ಮಾಣಕ್ಕೆ ಈಗಲೇ ಶಂಕುಸ್ಥಾಪನೆ ನೆರವೇರಬೇಕಿತ್ತು. ಆದರೆ ಗ್ರಾಮ ಪಂಚಾಯಿತಿ ಚುನಾವಣೆಯ ನೀತಿ ಸಂಹಿತೆ ಕಾರಣ ಶಂಕು ಸ್ಥಾಪನೆಯನ್ನು ಮುಂದೂಡಲಾಗಿದೆ ಎಂದು ತಿಳಿಸಿದರು

error: Content is protected !!