January 10, 2025

Newsnap Kannada

The World at your finger tips!

Nikhil Kumaraswamy

ನನ್ನ ಕರ್ಮ ಭೂಮಿ, ನನ್ನ ಆಯ್ಕೆ ಮಂಡ್ಯಾನೆ – ನಿಖಿಲ್ ಕುಮಾರಸ್ವಾಮಿ

Spread the love

ಸೋಲು, ಗೆಲುವು ರಾಜಕಾರಣದಲ್ಲಿ ಸಹಜ. ಆದರೆ ನನ್ನ ಕರ್ಮ, ಆಯ್ಕೆ ಯಾವಾಗಲೂ ಮಂಡ್ಯಾನೇ ಆಗಿದೆ ಎಂದು ರಾಜ್ಯ ಯವ ಜೆಡಿಎಸ್ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭಾನುವಾರ ಹೇಳಿದರು.

ಕೆ ಆರ್ ಪೇಟೆ ತಾಲೂಕಿನ ಚೌಡೇನಹಳ್ಳಿ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ನಂಜೇಗೌಡ ನಿವಾಸಕ್ಕೆ ಭೇಟಿ ನೀಡಿ ಸಾಂತ್ವಾನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಿಖಿಲ್ , ನನ್ನ ತಂದೆಗೆ ರಾಮನಗರವೇ ಕರ್ಮ ಭೂಮಿ. ನಂಗೆ ಮಂಡ್ಯ ಕರ್ಮ ಭೂಮಿ ಎಂದರು.

ನಾನು ಸೋತಿದ್ದೇನೆ ನಿಜ. ಆದರೆ ಮನೆಯಲ್ಲಿ ಕೂರಲಾರೆ. ಯಾವ ರಾಜಕಾರಣಿಗಳು ಮನೆಯಲ್ಲಿ ಕೂರುವುದಿಲ್ಲ. ನಿರಂತರ ಸಂಪರ್ಕ ಇಟ್ಟುಕೊಂಡು ಜನರೊಂದಿಗೆ ಇರಲು ಬಯಸುತ್ತೇನೆ. ನಾನು ಸದಾ ಜನರ ಜೊತೆಯಲ್ಲಿ ಇರುತ್ತೇನೆ. ಆಗ ಜನರೂ ಸಹ ನಮ್ಮನ್ನು ಒಪ್ಪಿಕೊಳ್ಳುತ್ತಾರೆಂಬ ವಿಶ್ವಾಸವೂ ನನಗಿದೆ ಎಂದರು.

ನನ್ನ ಮೊದಲ ಆಯ್ಕೆ ಜನ, ಪಕ್ಷ , ಸಂಘಟನೆ. ನಂತರ ಸಿನೆಮಾಗೆ ಆದ್ಯತೆ.
ಮೊದಲು ನನ್ನ ಪಕ್ಷ ಕೊಟ್ಟ ಜವಾಬ್ದಾರಿ ಕಡೆಗೆ ನಾನು ಗಮನಹರಿಸುತ್ತೇನೆ. ನಂತರ ಉಳಿದ ಆದ್ಯತೆ ಗಳ ಬಗ್ಗೆ ಗಮನಹರಿಸುವುದಾಗಿ ಹೇಳಿದರು.

ಮುಂದಿನ ಎಂಪಿ ನಿಖಿಲ್ ಎಂಬ ಅಭಿಮಾನಿಗಳ ಘೋಷಣೆ ಘೋಷಣೆಗೆ ಪ್ರತಿಕ್ರಿಯೆ ನೀಡಿದ ನಿಖಿಲ್ ಅಭಿಮಾನಿಗಳು, ಕಾರ್ಯಕರ್ತರು ನನ್ನ ಮೇಲೆ ವಿಷೇಶ ಪ್ರೀತಿ, ಗೌರವ ಇಟ್ಟಿದ್ದಾರೆ ನನ್ನ ಕೊನೆ ಉಸಿರಿನವರೆಗೂ ಅವರಿಗಾಗಿ ಹೋರಾಟ ಮಾಡ್ತೀನಿ ಎಂದರು.

ರೈತರ ಆತ್ಮಹತ್ಯೆ ದಿನನಿತ್ಯ ನಡೆಯುತ್ತಿದೆ ನಂಜೇಗೌಡರು ಸಾಲದ ಹೊರೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಡ್ಡಿ ಕಟ್ಟಲಾಗದೆ, ಸರಿಯಾದ ಬೆಲೆ ಸಿಗದೇ ಇವತ್ತು ಆತ್ಮಹತ್ಯೆ ದಾರಿ ಹಿಡಿದಿದ್ದಾರೆ ಮುಂದಿನ ದಿನಗಳಲ್ಲಿ ರೈತರು ಸಾಲ ಮಾಡದ ರೀತಿ ಕಾರ್ಯಕ್ರಮ ಮಾಡೋದು ಕುಮಾರಣ್ಣನ ಕನಸಾಗಿತ್ತು ಎಂದರು.

ಸಾಂತ್ವನ ಹೇಳಿ ನಾವು ಹೋಗಬಹುದು, ಆದ್ರೆ ಸರ್ಕಾರ ರೈತರ ಆತ್ಮಹತ್ಯೆ ನಿಲ್ಲಿಸುವ ರೀತಿಯಲ್ಲಿ ಕೆಲಸ ಮಾಡ್ಬೇಕು ಎಂದು ಹೇಳಿದರು.

ರೈತನ ಮನೆಗೆ ಸಚಿವರೂ ಇಂದೇ ಬಂದು ಹೋದ ವಿಚಾರ ಕುರಿತು ವಿವರ ನೀಡಿ, ನಾನು ಬರ್ತೀನಿ ಎಂದು ರೈತನ ಮನೆಗೆ ಭೇಟಿ ಕೊಟ್ರಲ್ಲ ಅದು ಸಂತೋಷ. ನಾನು ಬಂದಿಲ್ಲ‌ ಅಂದ್ರೆ ಸಚಿವರು ಬರ್ತಿರಲಿಲ್ಲವೇನೋ ಎಂದು ನಿಖಿಲ್ ಕುಟುಕಿದರು.

Copyright © All rights reserved Newsnap | Newsever by AF themes.
error: Content is protected !!