ರಾಜ್ಯದಲ್ಲಿ ವ್ಯಾಪಕವಾಗಿ ಹರಡಿರುವ ಕೋವಿಡ್‌ನ್ನು ನಿಯಂತ್ರಣ ಮಾಡುವುದೇ ನನ್ನ ಗುರಿ ಎಂದು ವೈದ್ಯಕೀಯ ಸಚಿವ ಡಾ. ಸುಧಾಕರ್ ಸೋಮವಾರ ಶಪಥ ಮಾಡಿದರು.
ಆರೋಗ್ಯ ಸಚಿವ ಸ್ಥಾನವನ್ನು ನನಗೆ ನೀಡುವುದಾಗಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ನಮ್ಮ ಪಕ್ಷದ ನಾಯಕರು, ಮುಖ್ಯಮಂತ್ರಿಗಳು ನನಗೆ ಈ ಜವಾಬ್ದಾರಿ ನೀಡಿದ್ದಾರೆ. ನಾನು ಈ ಜವಾಬ್ದಾರಿಯನ್ನು ಸೂಕ್ತ ರೀತಿಯಲ್ಲಿ ನಿಭಾಯಿಸುತ್ತೇನೆ’ ಎಂದರು.
ವಿಜಯನಗರದ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ, ಶ್ರೀ ನಿರ್ಮಲಾನಂದ ಸ್ವಾಮೀಜಿಯವರ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ನಿನ್ನೆ ಸಾಯಂಕಾಲ ಮುಖ್ಯಮಂತ್ರಿಗಳು, ಪಕ್ಷದ ನಾಯಕರು ನನಗೆ ಕರೆ ಮಾಡಿ ಆರೋಗ್ಯ ಸಚಿವನಾಗಿಯೂ ಕಾರ್ಯ ನಿರ್ವಹಿಸಲು ಸೂಚನೆ ನೀಡಿದರು. ಈಗಾಗಲೇ ನಾನು ಆರೋಗ್ಯ ಸಚಿವರ ಕೆಲಸ ಕಾರ್ಯಗಳನ್ನು ಪ್ರಾರಂಭ ಮಾಡಿದ್ದೇನೆ. ಇಂದು ಅಥವಾ ನಾಳೆ ಆದೇಶ ಬರುತ್ತದೆ. ಆದೇಶ ಬಂದ ತಕ್ಷಣ ಇಲಾಖೆಗೆ ಭೇಟಿ ನೀಡಿ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸುವೆ’ ಎಂದು ಹೇಳಿದರು.
ಇಂದು ಮೈಸೂರಿಗೆ ಭೇಟಿ ನೀಡುವ ಕುರಿತು ಮಾಹಿತಿ ಹಂಚಿಕೊಂಡ ‘ಮೈಸೂರಿನಲ್ಲಿ ಕಳೆದ ಕೆಲ ದಿನಗಳಿಂದ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿವೆ. ನಾನು ಅಲ್ಲಿನ ಆರೋಗ್ಯ ಇಲಾಖೆಯ ಅಧಿಕಾರಿಗಳು, ಆರೋಗ್ಯಾಧಿಕಾರಿಗಳು, ಖಾಸಗೀ ಅಸ್ಪತ್ರೆಯ ಮುಖ್ಯಸ್ಥರೊಂದಿಗೆ ಎರಡು ಮೂರು ಸುತ್ತಿನ ಸಭೆ ನಡೆಸಲಿದ್ದೇನೆ’ ಎಂದರು.
ಧಿಡೀರ್ ಖಾತೆ ಬದಲಾವಣೆಯ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ‘ನಾನು ನಿನ್ನೆ ಸಂಜೆಯೇ ಶ್ರೀರಾಮುಲು ಜೊತೆ ಮಾತನಾಡಿರುವೆ. ಅಲ್ಲದೇ ಸಮಾಜಕಲ್ಯಾಣ ಇಲಾಖೆಯೂ ಕೂಡ ಬಹು ದೊಡ್ಡ ಇಲಾಖೆ. ಅವರಿಗೂ ಆ ಇಲಾಖೆಯ ಬಗ್ಗೆ ಮನಸ್ಸು ಇಟ್ಟುಕೊಂಡಿದ್ದರು. ನಾವು ಯಾವುದೇ ಗೊಂದಲವಿಲ್ಲದೇ ಪರಸ್ಪರ ಸಹಕಾರದಿಂದ ಕಾರ್ಯ ನಿರ್ವಹಿಸಲಿದ್ದೇವೆ. *ಮೊದಲು ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಇಲಾಖೆ ಒಂದೇ ಖಾತೆಯಾಗಿದ್ದವು ಎಂದರು.
2000ದಲ್ಲಿ ಕ್ಯಾಬಿನೆಟ್ ಸಚಿವರು ಹೆಚ್ಚಾಗಿದ್ದರಿಂದ ಈ ಖಾತೆಯನ್ನು ಎರಡು ಭಾಗ ಮಾಡಿದ್ದರು. ಈಗ ನಮ್ಮ ಮುಖ್ಯಮಂತ್ರಿಗಳು ಇವೆರಡನ್ನೂ ಒಂದು ಮಾಡಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.
ಇದೇ ಸಂದರ್ಭದಲ್ಲಿ ಆರ್‌ಆರ್ ನಗರದ ಉಪ ಚುಣಾವಣೆಯಲ್ಲಿ, ಬಿಜೆಪಿ ಅಭ್ಯರ್ಥಿಯಾದ ಮುನಿರತ್ನ ಟಿಕೆಟ್ ಕುರಿತು ಮಾತನಾಡಿ, ‘ಈಗಾಗಲೇ 15 ಶಾಸಕರಿಗೆ ಬಿಜೆಪಿಯಲ್ಲಿ ಸ್ಥಾನ ಸಿಕ್ಕಿದೆ. ಈಗ ಅವರಿಗೂ ಸ್ಥಾನ ಸಿಕ್ಕಿದರೆ ಬಿಜೆಪಿ ಪಕ್ಷ ಕೊಟ್ಟ ಮಾತಿನಂತೆ ನಡೆದು ಕೊಂಡಂತಾಗುತ್ತದೆ’ ಎಂದರು.
More Stories
ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು