January 29, 2026

Newsnap Kannada

The World at your finger tips!

WhatsApp Image 2022 04 04 at 4.20.40 PM

ನನ್ನ ಮಗಳು ಡ್ರಗ್ಸ್ ಸೇವಿಸಿಲ್ಲ : ಅವಳು ಅಂತಹವಳಲ್ಲ – ನಟ ನಾಗಬಾಬು

Spread the love

ಟಾಲಿವುಡ್ ಮೆಗಾ ಕುಟುಂಬದ ಕುಡಿ ನಟಿ ನಿಹಾರಿಕಾ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವುದು, ಕುಟುಂಬವನ್ನು ಹೈರಾಣಾಗಿಸಿದೆ.
ಆದರೆ ಆಕೆಯ ತಂದೆ ನನ್ನ ಮಗಳು ನಿಹಾರಿಕಾ ಡ್ರಗ್ಸ್ ಸೇವಿಸಿಲ್ಲ ಅವಳು ಅಂತಹವಳಲ್ಲ ಎಂದಿದ್ದಾರೆ.

ತಮ್ಮ ಪುತ್ರಿಯ ವಿಚಾರವಾಗಿ ನಟ ನಾಗಬಾಬು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೆ ವೀಡಿಯೋವನ್ನು ಹಂಚಿಕೊಂಡಿದ್ದಾರೆ ತಮ್ಮ ಪುತ್ರಿ ನಿಹಾರಿಕಾ ಪಬ್‍ನಲ್ಲಿದ್ದದ್ದು ನಿಜ. ಆದರೆ ನಿಹಾರಿಕಾ ರೇವ್ ಪಾರ್ಟಿಯಲ್ಲಿ ಭಾಗಿಯಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಡಗ್ರ್ಸ್ ಪಾರ್ಟಿಯಲ್ಲಿ ಟಾಲಿವುಡ್ ನಟ ನಾಗಬಾಬು ಪುತ್ರಿ ನಿಹಾರಿಕಾ ಕೊನಿಡೆಲಾ ಇದ್ದರು ಎನ್ನುವ ಕಾರಣಕ್ಕಾಗಿ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಯುಗಾದಿ ಹಬ್ಬದಂದು ಹೈದರಾಬಾದ್‍ನ ಫೈವ್ ಸ್ಟಾರ್ ಹೋಟೆಲ್ ಒಂದರಲ್ಲಿ ರೇವ್ ಪಾರ್ಟಿ ನಡೆದಿದೆ ಈ ಪಾರ್ಟಿಯಲ್ಲಿ ಸೆಲೆಬ್ರೆಟಿಗಳ ಮಕ್ಕಳು ಮತ್ತು ಪ್ರಭಾವಿ ಮಕ್ಕಳು ಸೇರಿದಂತೆ ಸುಮಾರು 150ಕ್ಕೂ ಹೆಚ್ಚು ಮಂದಿ ರೇವ್ ಪಾರ್ಟಿಯಲ್ಲಿ ಭಾಗವಹಿಸಿದ್ದರು.

ಇದೇ ವೇಳೆ ಹೊಟೇಲ್‍ನಲ್ಲಿಯೇ ಇದ್ದ ನಿಹಾರಿಕಾ ಕೊನಿಡೆಲಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇನ್ನೂ ಈ ಸುದ್ದಿ ಟಿ-ಟೌನ್‍ನಲ್ಲಿ ಭಾರೀ ಸದ್ದು ಮಾಡಿತ್ತು.

ಬಂಜಾರಾ ಹಿಲ್ಸ್ ಠಾಣೆಯ ಪೊಲೀಸರು ನಿಹಾರಿಕ ಅವರನ್ನು ವಶಕ್ಕೆ ಪಡೆದು ಕೆಲ ಸಮಯ ವಿಚಾರಣೆ ನಡೆಸಿ, ಮನೆಗೆ ಕಳುಹಿಸಿದ್ದಾರೆ, ವಿಚಾರಣೆ ಬಳಿಕ ನಿಹಾರಿಕಾ ಕೊನಿಡೆಲಾ ಪೊಲೀಸ್ ಠಾಣೆಯಿಂದ ಹೊರಬರುತ್ತಿದ್ದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

error: Content is protected !!