January 11, 2025

Newsnap Kannada

The World at your finger tips!

meghana

ಗೋಲಿಬಾರ್ ಗೆ ಬಲಿಯಾದ ಮೇಘಾ ಶೆಟ್ಟಿ ಅಣ್ಣ! ಕಣ್ಣೀರಿಟ್ಟ ನಟಿ!

Spread the love

ಕಿರುತೆರೆ ಫೇಮಸ್ ನಟಿ ಜೊತೆ ಜೊತೆಯಲ್ಲಿ ಧಾರವಾಹಿ ಹೀರೊಯಿನ್ ಮೇಘಾ ಶೆಟ್ಟಿ ಅಣ್ಣ ಗೋಲಿಬಾರ್ ನಲ್ಲಿ ದುರಂತ ಸಾವು ಕಂಡ ಘಟನೆ ಮನ‌ ಮಿಡಿಯುತ್ತದೆ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಾಗೂ ಅತಿ ಹೆಚ್ಚು ಟಿಆರ್‌ಪಿ ಪಡೆಯುತ್ತಿರುವ ಧಾರಾವಾಹಿ ‘ಜೊತೆ ಜೊತೆಯಲಿ’ಯ ಪ್ರಮುಖ ಪಾತ್ರಧಾರಿ ಅನು ಸಿರಿಮನೆ ಅಲಿಯಾಸ್ ಮೇಘಾ ಶೆಟ್ಟಿ ಜೀ ಕುಟುಂಬ ಅವಾರ್ಡ್ ಕಾರ್ಯಕ್ರಮದಲ್ಲಿ ತಮ್ಮ ವೈಯಕ್ತಿಕ ಬದುಕಿನ ಮರೆಯಲಾಗದ ಘಟನೆಯ ಬಗ್ಗೆ ಹೇಳಿ ಕಣ್ಣೀರಿಟ್ಟಿದ್ದಾರೆ.

ಅಣ್ಣಾವರ ಅಂತಿಮ ದರ್ಶನಕ್ಕೆ ಹೋದವ….

ಜೀ ಕುಟುಂಬ ಅವಾರ್ಡ್ ಕಾರ್ಯಕ್ರಮದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ನಟಿ ಮೇಘಾ ಶೆಟ್ಟಿ ನಟ ಧನಂಜಯ್ ಅವರಿಂದ ಪ್ರಶಸ್ತಿ ಪಡೆದು ಮನದಾಳದ ನೋವು ಬಿಚ್ಚಿಟ್ಟರು.
ಸ್ವಂತ ಅಣ್ಣನನ್ನು ನಾನು ಎಂದೂ ಮರೆಯಲಾರೆ.
ಅಣ್ಣ ನನ್ನನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದರು. ಡಾಕ್ಟರ್ ರಾಜ್‌ಕುಮಾರ್‌ ಸಾವಿನ ದಿನ ಪಾರ್ಥಿವ ಶರೀರವನ್ನು ನೋಡಲು ಅಣ್ಣನೂ ಎಲ್ಲಾ ಅಭಿಮಾನಿಗಳಂತೆಯೇ ಹೋಗಿದ್ದರಂತೆ. ಆ ಸಮಯದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ತುಂಬಿಕೊಂಡಿದ್ದ ಕಾರಣ ಪೊಲೀಸರು ನಿಯಂತ್ರಿಸಲು ಗೋಲಿಬಾರ್ ಮಾಡಬೇಕಾಯಿತು. ಆದರೆ ವಿಧಿಯ ಆಟವೇ ಬೇರೆ ಇತ್ತು. ಆ ದಿನ ಗೋಲಿಬಾರಿನಿಂದ ನನ್ನ ಅಣ್ಣ, ಸ್ಥಳದಲ್ಲಿಯೇ ಕೊನೆಯುಸಿರೆಳೆದರು ಎಂದು ನೋವು ಹಂಚಿ ಕೊಂಡಿದ್ದಾರೆ. 

7dd7c4ea 5010 45a3 8445 23899b0df93f

ಸಿನಿಮಾ, ರಂಗಭೂಮಿ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದ ಕಾರಣ ಇಂದು ಮೇಘಾ ಶೆಟ್ಟಿ ಅವರು ತುಂಬಾನೇ ಸಂತೋಷವಾಗಿದ್ದರಂತೆ. ಅಣ್ಣನ ಸ್ಥಾನ ನೀಗಿಸಲು ಮೇಘಾ ಶೂಟಿಂಗ್‌ ಸೆಟ್‌ನಲ್ಲಿ ಪ್ರತಿಯೊಬ್ಬರನ್ನೂ ಅಣ್ಣ ಎಂದೇ ಮಾತನಾಡಿಸುತ್ತಾರಂತೆ.

ಒಟ್ಟಿನಲ್ಲಿ ದುಃಖ ಎನ್ನುವುದು ಮರಕ್ಕಲ್ಲ, ಮನುಷ್ಯನಿಗೇ ಬರುವುದು. ಪ್ರತಿಯೊಬ್ಬರೂ ಒಂದೊಂದು ಹಂತದಲ್ಲಿ ಒಂದೊಂದು ರೀತಿಯ ನೋವನ್ನು ಅನುಭವಿಸಿರುತ್ತಾರೆ.

Copyright © All rights reserved Newsnap | Newsever by AF themes.
error: Content is protected !!