ಬೆಂಗಳೂರಿನ ಮುತ್ತೂಟ್ ಫೈನಾನ್ಸ್ ಕಚೇರಿಯಿಂದ 25 ಕೆ.ಜಿ ಚಿನ್ನ ಮತ್ತು ಹಣವನ್ನು ದರೋಡೆಕೋರರು ಕದ್ದೊಯ್ದ ಪ್ರಕರಣದಲ್ಲಿ ಮಹತ್ತರ ಬೆಳವಣಿಗೆ ವರದಿಯಾಗಿದೆ.
ದರೋಡೆಕೋರರು ಹೊತ್ತೊಯ್ದಿದ್ದ ಚಿನ್ನಾಭರಣದ ಬಾಕ್ಸ್ಗಳುಈಗ ರಾಜ್ಯದ ಗಡಿಯಲ್ಲಿ ಪತ್ತೆಯಾಗಿದೆ.
ಅತ್ತಿಬೆಲೆ – ಆನೇಕಲ್ ರಸ್ತೆಯ ಭಕ್ತಿಪುರ ಗೇಟ್ ಬಳಿ ಚಿನ್ನಾಭರಣದ ಬಾಕ್ಸ್‌ಗಳು ಪತ್ತೆಯಾಗಿದೆ.
ಚಿನ್ನಾಭರಣ ಬಾಕ್ಸ್‌ಗೆ ಜಿಪಿಎಸ್ ಸಿಸ್ಟಂ ಅಳವಡಿಸಲಾಗಿತ್ತು. ಹೀಗಾಗಿ, ದರೋಡೆ ಬಳಿಕ ಜಿಪಿಎಸ್ ಟ್ರ್ಯಾಕ್ ಮಾಡಿದ್ದ ಪೊಲೀಸರು ಚಿನ್ನಾಭರಣವಿದ್ದ ಬಾಕ್ಸ್‌ಗಳನ್ನು ಪೊದೆಯೊಂದರಲ್ಲಿ ಪತ್ತೆ ಹಚ್ಚಿದ್ದಾರೆ.
ಖದೀಮರು ರಸ್ತೆ ಪಕ್ಕದ ಪೊದೆಯಲ್ಲಿ ಖಾಲಿ ಬಾಕ್ಸ್ ಎಸೆದು ಪರಾರಿ ಯಾಗಿದ್ದಾರೆ. ಬಾಕ್ಸ್ಗಳ ಜೊತೆ ಚಿನ್ನಾಭರಣದ ಬಿಲ್‌ಗಳು ಸಹ ಪತ್ತೆಯಾಗಿದೆ.
ಅತ್ತಿಬೆಲೆ ಠಾಣೆ ಪೊಲೀಸರು ಸಹ ಪರಿಶೀಲನೆ ನಡೆಸಿದರು.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು