ರಂಗಕರ್ಮಿ ಮುಖ್ಯಮಂತ್ರಿ ಚಂದ್ರುಗೆ ಮುರುಘಾಶ್ರೀ ಪ್ರಶಸ್ತಿ

Team Newsnap
1 Min Read

ಚಿತ್ರದುರ್ಗದ ಮುರುಘಾ ಮಠದ ಶರಣ ಸಂಸ್ಕೃತಿ ಉತ್ಸವದಲ್ಲಿ ಪ್ರದಾನ ಮಾಡಲಾಗುವ ‘ಮುರುಘಾಶ್ರೀ’ ಪ್ರಶಸ್ತಿಗೆ ಖ್ಯಾತ ರಂಗಕರ್ಮಿ, ಚಿತ್ರನಟ ಮುಖ್ಯಮಂತ್ರಿ‌ ಚಂದ್ರು ಭಾಜರಾಗಿದ್ದಾರೆ.

ಕೇವಲ ‘ಮುರುಘಾಶ್ರೀ’ ಪ್ರಶಸ್ತಿ ಅಲ್ಲದೇ ‘ಭರಮಣ್ಣ ನಾಯಕ ಶೌರ್ಯ’ ಪ್ರಶಸ್ತಿಯನ್ನೂ ಮುರುಘಾ ಮಠದ ಶರಣ ಸಂಸ್ಕೃತಿ ಉತ್ಸವದಲ್ಲಿ ನೀಡಲಾಗುತ್ತದೆ. ಈ ಬಾರಿಯ ‘ಭರಮಣ್ಣ ನಾಯಕ ಶೌರ್ಯ ಪ್ರಶಸ್ತಿ’ಯನ್ನು ಹತ್ತು ಭಾಷೆಗಳಲ್ಲಿ‌ ಮಾತನಾಡಬಲ್ಲಂತಹ 17 ವರ್ಷದ ಬಾಲಕಿ ಜಾಹ್ನವಿಯವರಿಗೆ ನೀಡಲಾಗುತ್ತದೆ.

ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅಕ್ಟೋಬರ್ 24ರಂದು ಹಮ್ಮಿಕೊಂಡಿದೆ ಮುರುಘಾ ಮಠದ ಶರಣ ಸಂಸ್ಕೃತಿ ಉತ್ಸವ ಸಮಿತಿ.

ಮುಖ್ಯಮಂತ್ರಿ‌ ಚಂದ್ರು ಜೊತೆ, ಬಸವ ತತ್ವ ಪ್ರಚಾರಕರಾದ ಹುಲಸೂರು ಗುರುಬಸವೇಶ್ವರ ಮಠದ ಮಠಾಧೀಶ ಶಿವಾನಂದ ಸ್ವಾಮೀಜಿ, ಧರ್ಮದರ್ಶಿ ಎಸ್. ಷಣ್ಮುಖಪ್ಪ, ಮಧ್ಯಪಾನ ವಿರೋಧ ಹೋರಾಟಗಾರ್ತಿ ಸ್ವರ್ಣ ಭಟ್, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹೆಚ್. ಬಿಲ್ಲಪ್ಪ ಇವರಿಗೆ ಪ್ರಶಸ್ತಿ ದೊರೆಯಲಿದೆ.

ಪ್ರಶಸ್ತಿಗಳು 25,000 ನಗದು ಹಾಗೂ ಫಲಕಗಳನ್ನು ಒಳಗೊಂಡಿವೆ.

Share This Article
Leave a comment