ಪೋಕ್ಸೋ ಪ್ರಕರಣದಲ್ಲಿ ಬಂಧಿತರಾಗಿರುವ ಮುರುಘಾ ಮಠದ ಶ್ರೀಗಳನ್ನು 4 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಶ್ರೀಮತಿ ಬಿ.ಕೆ ಕೋಮಲಾ ಆದೇಶ ಮಾಡಿದ್ದಾರೆ.
ಆರೋಪಿಯನ್ನು ಐದು ದಿನಗಳ ಕಾಲ ತನಿಖೆ ನಡೆಸುವ ಸಲುವಾಗಿ ಕಸ್ಟಡಿಗೆ ನೀಡುವಂತೆ ಪೊಲೀಸರು ಮನವಿ ಸಲ್ಲಿಸಿದ್ದರು.
ಮೈಸೂರು ಹೋಟೆಲ್ ನಲ್ಲಿ ಪ್ರೇಯಸಿಯನ್ನು ಕೊಲೆಗೈದ ಪ್ರಿಯಕರ ಬಂಧನ
ಆದರೆ ಕೋರ್ಟ್ ವಿಚಾರಣೆ ನಡೆಸಿ 4 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಇಂದಿನಿಂದ ಸೆಪ್ಟೆಂಬರ್ 6ರ ವರೆಗೆ ಶ್ರೀಗಳು ಪೊಲೀಸ್ ಕಸ್ಟಡಿಯಲ್ಲಿರಲಿದ್ದಾರೆ.
ಜೊತೆಗೆ ಅಗತ್ಯವಿದ್ದರೆ ಪೊಲೀಸ್ ಕಸ್ಟಡಿಯಲ್ಲೇ ವೈದ್ಯಕೀಯ ನೆರವು ನೀಡುವಂತೆ ಚಿತ್ರದುರ್ಗದ ಜೆಎಂಎಫ್ ಕೋರ್ಟ್ ಆದೇಶಿಸಿದೆ.
ಇಂದು ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರು ಪಡಿಸಲು ನ್ಯಾಯಾಧೀಶರು ಸೂಚಿಸಿದ್ದರು. ಬಳಿಕ 4 ಗಂಟೆಗೆ ಶ್ರೀಗಳು ನ್ಯಾಯಾಲಯಕ್ಕೆ ಹಾಜರಾಗಿದ್ದರು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು