December 23, 2024

Newsnap Kannada

The World at your finger tips!

muraga durga

ಮುರುಘಾ ಸ್ವಾಮಿ ಮಕ್ಕಳ ಅಶ್ಲೀಲ ವೀಡಿಯೋ ನೋಡುವ ಚಟವಿದೆ : ಒಡನಾಡಿ ಆರೋಪ

Spread the love

ಚಿತ್ರದುರ್ಗ ಮುರುಘಾಮಠದ ಶಿವಮೂರ್ತಿ ಸ್ವಾಮಿಗೆ ಮುರುಘಾ ಮಠದ ವಸತಿ ಶಾಲೆಯಲ್ಲಿದ್ದ ಕೆಲ ಹೆಣ್ಣು ಮಕ್ಕಳ ಅಶ್ಲೀಲ ವೀಡಿಯೋ ಸಹ ಮಾಡಿ ಅದನ್ನು ಸ್ವಾಮೀಜಿಗಳಿಗೆ ಮಾರಾಟ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಈ ಕುರಿತು ಮಾತನಾಡಿರುವ ಒಡನಾಡಿ ಸಂಸ್ಥೆಯ ಮುಖ್ಯಸ್ಥ ಪರಶುರಾಮ್, ಮರುಘಾ ಮಠದ ವಸತಿ ಶಾಲೆಯಲ್ಲಿದ್ದ ಕೆಲ ಮಕ್ಕಳ ಬೆತ್ತಲೆ ವೀಡಿಯೋ ಮಾಡಿ ಸ್ವಾಮೀಜಿಗೆ ಮಾರಾಟ ಮಾಡಿದ್ದಾರೆ. ವೀಡಿಯೋ ಮಾಡುವ ವಿಚಾರದಲ್ಲಿ ಸ್ವಾಮೀಜಿಯ ಪಾತ್ರವೂ ಇದೆ. ಮಠದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೇ ಈ ವಿಚಾರ ಹೇಳಿಕೊಂಡಿರುವುದಾಗಿ ತಿಳಿಸಿದ್ದಾರೆ. ಇದನ್ನು ಓದಿ – ಮಳವಳ್ಳಿಯಲ್ಲಿ ರೇಪ್ ಮಾಡಿ ಬಾಲಕಿಯನ್ನು ಹತ್ಯೆಗೈದ – ಕಾಮುಕ ಕಾಂತರಾಜು ಗಲ್ಲಿಗೆ ಆಗ್ರಹ

ವೀಡಿಯೋ ಮಾಡಿದವರು, ವೀಡಿಯೋ ಮಾರಾಟ ಮಾಡಿದವರ ಬಂಧನವೂ ಆಗಬೇಕು. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳ ದೊಡ್ಡ ಪಟ್ಟಿಯೇ ಇದೆ. ಇನ್ನೂ ಅನೇಕರು ಈ ಬಗ್ಗೆ ದೂರು ಕೊಡುವುದು ನಿಶ್ಚಿತ. ಮಠದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಇಬ್ಬರು ಅಪ್ರಾಪ್ತ ಮಕ್ಕಳ ಮೇಲೆ ನಿರಂತರವಾಗಿ ಲೈಂಗಿಕ ಶೋಷಣೆ ಆಗಿದೆ ಎಂದು ಆರೋಪಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!