January 10, 2025

Newsnap Kannada

The World at your finger tips!

MADDUR

ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ- ಕೊಲೆ: ಅಪ್ರಾಪ್ತ ನ ಬಂಧನ

Spread the love

ಅಪ್ರಾಪ್ತ ಬಾಲಕಿ ಮೇಲೆ ಕಿಡಿಗೇಡಿಯೊಬ್ಬ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿರುವ ಮದ್ದೂರಿನ ಹುರುಗಲವಾಡಿ ಗ್ರಾಮದ ಕಬ್ಬಿನ ಗದ್ದೆ ಬಳಿ ಜರುಗಿದೆ.

ಹಗರಿಬೊಮ್ಮನಹಳ್ಳಿ ತಾಲೂಕಿನ ಕಾಳ ಬಸಾಪುರ ತಾಂಡಾ ಗ್ರಾಮದ
ಪಾಂಡು ನಾಯಕ್ ಪುತ್ರಿ ಆರತಿಬಾಯಿ (12) ಕೊಲೆಯಾದ ಬಾಲಕಿ.

ಬಳ್ಳಾರಿ ಜಿಲ್ಲೆಯಿಂದ ಕೊಪ್ಪ ಕಾರ್ಖಾಗೆ ಕಬ್ಬು ಕಡಿಯಲು ಬಂದು ಕೊಪ್ಪದಲ್ಲಿ ಟೆಂಟ್ ನಿರ್ಮಿಸಿಕೊಂಡು ವಾಸವಿದ್ದರು.ಹುರುಗಲವಾಡಿ ಗ್ರಾಮದ ಬಳಿ ಬುಧವಾರ ಬೆಳಗ್ಗೆ 10 ಗಂಟೆಯ ಸಮಯದಲ್ಲಿ ಕಬ್ಬು ಕಡಿಯಲುಆರತಿ ಬಾಯಿ ತಾಯಿ ಜತೆಯಲ್ಲಿ ತೆರಳಿದ್ದರು.

ಕಿಡಿಗೇಡಿಯೊಬ್ಬ ಬಾಲಕಿಯನ್ನುಅತ್ಯಾಚಾರಕ್ಕೆ ಯತ್ನಿಸಿ ಬಾಲಕಿಯನ್ನು ಕುಡುಗೋಲಿನಿಂದ ಬಾಲಕಿಯ ಕತ್ತು ಕುಯ್ದು ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಈ ಕೃತ್ಯವನ್ನು ಖಂಡಿಸಿರುವ ಗ್ರಾಮಸ್ಥರುಇಂತಹ ಘಟನೆಗಳು ಮುಂದೆ ನಡೆಯದಂತೆ ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಮ್, ಡಿವೈಎಸ್ಪಿ
ಪೃಥ್ವಿ ಆಗಮಿಸಿ ಪರಿಶೀಲನೆ ಮಾಡಿದ್ದಾರೆ. ಈ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ

ಅಪ್ರಾಪ್ತನ ಬಂಧನ :
ಹುರುಗಲವಾಡಿಯಲ್ಲಿ ಅಪ್ರಾಪ್ತ ಬಾಲಕಿಯ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಗ್ರಾಮದ 17 ವರ್ಷದ ಬಾಲಕನನ್ನು ಪೋಲೀಸರು ಬಂಧಿಸಿದ್ದಾರೆ.

ಕೃತ್ಯ ನಡೆಸಿ ಅದೇ ಕಬ್ಬಿನ ಗದ್ದೆಯಲಿ ಅವಿತುಕೊಂಡಿದ್ದ ಬಾಲಕನ ವರ್ತನೆಯಿಂದ ಅನುಮಾನ ವ್ಯಕ್ತಪಡಿಸಿದ್ದ ಬಾಲಕಿ ಪೋಷಕರು.ಪೊಲೀಸರಿಗೂ ಅಸ್ಪಷ್ಟ ಮಾಹಿತಿ ನೀಡಿದ್ದರು.

ಅಪ್ರಾಪ್ತ ಯಾರೋ ಇಬ್ಬರು ಆ ಬಾಲಕಿಯನ್ನು ಎಳೆದೊಯ್ಯುತ್ತಿದ್ದರು.
ತಾನು ಬಿಡಿಸಲು ಹೋಗಿ ಭಯವಾಗಿ ಗದ್ದೆಯಲ್ಲಿ ಅವಿತು ಕುಳಿತಿದ್ದೆ ಎಂದು ಕಥೆ ಕಟ್ಟಿದ್ದ.

ನಿನ್ನೆಯ ಅಪ್ರಾಪ್ತನನ್ನು ವಶಕ್ಕೆ ಪಡೆದಿದ್ದ ಪೊಲೀಸರು ವಿಚಾರಣೆ ವೇಳೆ
ತಪ್ಪೊಪ್ಪಿಕೊಂಡಿರೋದಾಗಿ ಪೊಲೀಸರು ತಿಳಿಸಿದ್ದಾರೆ.

.

Copyright © All rights reserved Newsnap | Newsever by AF themes.
error: Content is protected !!