ವಿಜಯ್ (37) ಕೊಲೆಯಾದ ದುರ್ದೈವಿ. ಶಿವಮೊಗ್ಗದ ವೆಂಕಟೇಶ ನಗರದ ನಡುರಸ್ತೆಯಲ್ಲೇ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ. ಮೃತ ವಿಜಯ್ ಆಸ್ಪತ್ರೆವೊಂದರ ಅಕೌಂಟ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು.ಇಂದು ಸೂರ್ಯಗ್ರಹಣ – ಯಾವ ರಾಶಿಗಳ ಮೇಲೆ ಪ್ರಭಾವ, ಪರಿಣಾಮ
ಸ್ಥಳಕ್ಕೆ ಜಯನಗರ ಠಾಣೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ ವೈಯುಕ್ತಿಕ ಕಾರಣಕ್ಕಾಗಿ ವ್ಯಕ್ತಿ ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಘಟನೆ ಕುರಿತಂತೆ ಎಸ್ಪಿ ಮಿಥುನ್ ಕುಮಾರ್ ಮಾಹಿತಿ ನೀಡಿ , ಮೃತ ವ್ಯಕ್ತಿ ರಾತ್ರಿ 1:30ರ ವರೆಗೂ ಮನೆಯಲ್ಲೇ ಇದ್ದ. ಆ ನಂತರ ಆತನಿಗೆ ಯಾವುದೊ ಕರೆ ಬರುತ್ತೆ. ಆಗ ಮೃತ ವಿಜಯ್ ಅವರ ತಂದೆಗೆ ಕೆಲಸ ನಿಮಿತ್ತ ಹೊರಕ್ಕೆ ಹೋಗ್ತಿರೋದಾಗಿ ಹೇಳಿ ಮನೆಯಿಂದ ಹೊರ ಬರುತ್ತಾನೆ. ಸುಮಾರು 3 ಗಂಟೆ ಸಮಯದಲ್ಲಿ ಕೃತ್ಯ ನಡೆದಿದ್ದು, ಇದಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳು ಲಭ್ಯವಾಗಿದೆ. ಸ್ಥಳದಲ್ಲಿ ಕೆಲ ವಸ್ತುಗಳು ಲಭ್ಯವಾಗಿವೆ , ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದೇವೆ ಎಂದು ತಿಳಿಸಿದ್ದಾರೆ.
ನಗರದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಕೆಲಸ ಆಗುತ್ತದೆ ಎಂದು ತಿಳಿಸಿದರು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು