ಮದುವೆಯಾಗಿದ್ದರೂ ಪರ ಸ್ತ್ರೀ ಮೋಹದ ಬಲೆಗೆ ಬಿದ್ದಿದ್ದ ವ್ಯಕ್ತಿಯೊಬ್ಬ ಬರೋಬ್ಬರಿ ಮೂರು ಕೊಲೆ ಮಾಡಿದ್ದ. ಮಂಡ್ಯದಲ್ಲಿ 2 ತಿಂಗಳ ಹಿಂದೆ ನಾಲೆಯಲ್ಲಿ ಎರಡು ರುಂಡವಿಲ್ಲದ ಮೃತದೇಹ ತೇಲಿಬಂದಿತ್ತು.ಇದನ್ನು ಓದಿ –ಮೈಸೂರು ದಸರಾ 2022; ಆಗಸ್ಟ್ 7ಕ್ಕೆ ಗಜಪಯಣ ಆರಂಭ
ಈ ಪ್ರಕರಣದ ಬೆನ್ನುಬಿದ್ದ ಶ್ರೀರಂಗಪಟ್ಟಣ ಪೊಲೀಸರಿಗೆ ಲಿಂಕ್ ಸಿಕ್ಕಿದ್ದು ಚಾಮರಾಜನಗರದಲ್ಲಿನ ಒಂದು ಮಿಸ್ಸಿಂಗ್ ಕೇಸ್ ನಲ್ಲಿ ಆ ಮಿಸ್ಸಿಂಗ್ ಕೇಸ್ ಬೆನ್ನತ್ತಿದ್ದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರು ಮೂಲದ ಸಿದ್ದಲಿಂಗಪ್ಪ(35) ಎಂಬಾತನೇ ಕೊಲೆ ಆರೋಪಿ. ಈತನಿಗೆ ಮದುವೆಯಾಗಿದ್ದರೂ ಪತ್ನಿ ಸಂಬಂಧಿಯ ಜೊತೆ ಲವ್‌ನಲ್ಲಿ ಬಿದ್ದಿದ್ದ. ಆದರೆ ಆಕೆಗೆ ವೇಶ್ಯಾವಟಿಕೆ ಲಿಂಕ್ ಇತ್ತು. ಇದನ್ನು ಸಿದ್ದಲಿಂಗಪ್ಪ ಸಹಿಲಾಗದೇ ಪ್ರೇಯಸಿಯ ಲಿಂಕ್‌ನಲ್ಲಿದ್ದ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ಕೊಲೆಗೈಯ್ಯುತ್ತಿದ್ದ.
ಪ್ರೇಯಸಿಯ ಗುಂಗಲ್ಲಿ ಸಿದ್ದಲಿಂಗಪ್ಪ ಸೈಕೋ ಆಗಿದ್ದ. ಅದಕ್ಕಾಗಿ ಪ್ರೇಯಸಿಗೆ ಹಣ, ಚಿನ್ನಾಭರಣದ ಆಸೆ ಹುಟ್ಟಿಸಿ ಮೂವರು ಮಹಿಳೆಯರ ಕೊಲೆಗೈದಿದ್ದಾನೆ. ಜೂನ್ 7ರಂದು ಇಬ್ಬರು ಮಹಿಳೆಯರ ಕೊಲೆಗೈದು ರುಂಡ-ಮುಂಡ ಬೇರೆ ಮಾಡಿ ಮಂಡ್ಯದ ಬೇಬಿ ಗ್ರಾಮದ ಕೆರೆ ಹಾಗೂ ಅರಕೆರೆ ಸಮೀಪದ ಕಿರುನಾಲೆಯಲ್ಲಿ ಮೃತದೇಹ ಎಸೆದಿದ್ದ.
ನಾಪತ್ತೆ ಪ್ರಕರಣಗಳನ್ನು ಜಾಲಾಡಿದ್ರೂ ಪೊಲೀಸರಿಗೆ ಸುಳಿವು ಸಿಕ್ಕಿರಲಿಲ್ಲ. ಇತ್ತ ದೇಹದ ಮೇಲ್ಭಾಗ ಸಿಗದೆ, ಮೃತರ ನಾಪತ್ತೆ ಪ್ರಕರಣವೂ ದಾಖಲಾಗದೆ ಪೊಲೀಸರಿಗೆ ತಲೆನೋವಾಗಿತ್ತು. ಹೀಗಿರೋವಾಗ ಜು.25ರಂದು ಚಾಮರಾಜನಗರದಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು. ಕಾಲ್ ಲಿಸ್ಟ್ ಆಧರಿಸಿ ತನಿಖೆ ನಡೆಸಿದಾಗ 3 ಕೊಲೆ ಪ್ರಕರಣ ಬಯಲಾಗಿದೆ.
ಮೇ 30ರಂದು ಚಿತ್ರದುರ್ಗ ಮೂಲದ ಮಹಿಳೆಯೊಬ್ಬರ ಕೊಲೆಯಾಗಿತ್ತು. ಜು.3ರಂದು ಚಾಮರಾಜನಗರ ಮೂಲದ ಮತ್ತೊಂದು ಮಹಿಳೆಯ ಕೊಲೆಯಾಗಿತ್ತು. ಇಬ್ಬರನ್ನೂ ಮನೆಗೆ ಕರೆಸಿ ಕುತ್ತಿಗೆ ಬಿಗಿದು ಹತ್ಯೆಗೈದು, ನಂತರ ಇಬ್ಬರ ರುಂಡ ಮುಂಡ ಬೇರ್ಪಡಿಸಿ ನಾಲೆಗೆ ಎಸೆಯಲಾಗಿತ್ತು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು