January 7, 2025

Newsnap Kannada

The World at your finger tips!

congress,high court,lokayukta

shock for Congress: High Court order to cancel ACB - Lokyukta gets power again

ನಗರಸಭೆ, ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿಗೆ ಮತ್ತೆ ಕಂಟಕ

Spread the love
  • ರಾಜ್ಯದ ಎಲ್ಲಾ 277 ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತಿಯ ಅಧ್ಯಕ್ಷ – ಉಪಾಧ್ಯಕ್ಷ ಮೀಸಲಾತಿ ರದ್ದು ಮಾಡಿದ ಹೈಕೋರ್ಟ್.
  • ಈಗಾಗಲೇ ಚುನಾವಣೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಗಳ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆಯನ್ನೂ ಸಹ ಅಮಾನತ್ತಿನಲ್ಲಿಡಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ.
  • ನ್ಯಾಯಾಲಯದ ಈ ತೀರ್ಪು ಪ್ರಶ್ನೆ ಮಾಡಿ ಮೇಲ್ ಮನವಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ 10 ದಿನ ಕಾಲಾವಕಾಶ.
  • ಆರ್ ದೇವದಾಸ್ ಏಕ ಸದಸ್ಯ ಪೀಠದ ತೀರ್ಪಿನಲ್ಲಿ 4 ವಾರದೊಳಗೆ ಹೊಸ ಮೀಸಲಾತಿ ಪ್ರಕಟಿಸುವಂತೆ ಸೂಚನೆ
  • ಬಿ.ಬಿ.ಎಂ.ಪಿ.ಚುನಾವಣೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ನಲ್ಲಿ ನಾಳೆ ಮಧ್ಯಾಹ್ಮ 2-30ಕ್ಕೆ ಮೂಂದೂಡಿಕೆ.

ಅಕ್ಟೋಬರ್ 8 ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ್ ನ ಅಧ್ಯಕ್ಷ – ಉಪಾಧ್ಯಕ್ಷರ ಮೀಸಲಾತಿ ಪಟ್ಟಿಯನ್ನು ರಾಜ್ಯ ಹೈಕೋರ್ಟ್ ನ ಏಕ ಸದಸ್ಯ ಪೀಠ ರದ್ದು ಮಾಡಿದೆ.

ರಾಜ್ಯದ 277 ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತಿಯ ಮೀಸಲಾತಿಯನ್ನು ನಿಗದಿ ಮಾಡಿ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಅಲ್ಲದೆ ಅನೇಕ ಕಡೆ ಈಗಾಗಲೇ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ್ ನ ಅಧ್ಯಕ್ಷ – ಉಪಾಧ್ಯಕ್ಷ ರ ಆಯ್ಕೆಯೂ ನಡೆದು ಹೋಗಿದೆ

ಈಗಾಗಲೇ ಚುನಾಯಿತರಾದ ಅಧ್ಯಕ್ಷ – ಉಪಾಧ್ಯಕ್ಷರುಗಳು ಕಚೇರಿ ಕೆಲಸ ಕಾರ್ಯ ಗಳನ್ನು ನಡೆಸುತ್ತಿದ್ದಾರೆ. ಆದರೂ ಸಹ ಅಂತಹ ಅಧ್ಯಕ್ಷ – ಉಪಾಧ್ಯಕ್ಷರ ಸೇವೆಯನ್ನು ಅಮಾನತ್ತಿನಲ್ಲಿ ಇಡುವಂತೆ ಹೈಕೋರ್ಟ್ ಹೇಳಿದೆ.

ಈ ನಡುವೆ ತನ್ನ ತೀರ್ಪು ಪ್ರಶ್ನೆ ಮಾಡಿ ಮುಂದಿನ 10 ದಿನದೊಳಗೆ ಮೇಲ್ ಮನವಿ ಸಲ್ಲಿಸಲು ಸರ್ಕಾರಕ್ಕೆ ನ್ಯಾಯಾಲಯವು ಅವಕಾಶ ಕೂಡ ನೀಡಿದೆ.

Copyright © All rights reserved Newsnap | Newsever by AF themes.
error: Content is protected !!