ಮಂಗಳೂರು: ಮಾಜಿ ಶಾಸಕ ಮೊಯಿದ್ದೀನ್ ಬಾವ ಅವರ ತಮ್ಮ ಮುಮ್ತಾಜ್ ಅಲಿ ಅವರ ಮೃತದೇಹ ಪತ್ತೆಯಾಗಿದ್ದು, ಆರು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಹನಿಟ್ರ್ಯಾಪ್‌ನಿಂದ ಮುಮ್ತಾಜ್ ಅಲಿ ಬಲಿಯಾಗಿದ್ದಾರಾ ಎಂಬ ಪ್ರಶ್ನೆ ಈ ಪ್ರಕರಣದ ಪ್ರಮುಖ ವಿಚಾರವಾಗಿದೆ.
ಭಾನುವಾರ ಮುಂಜಾನೆ ಮುಮ್ತಾಜ್ ಅಲಿ ಕಾಣೆಯಾಗಿದ್ದರು. ಇದಾದ ನಂತರ, ಸಹೋದರ ಹೈದರ್ ಅವರು ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ದೂರು ಪ್ರಕಾರ, ಮಹಿಳೆ ಬಳಸಿಕೊಂಡು ಷಡ್ಯಂತ್ರ ರೂಪಿಸಿ, ಆತನ ಗೌರವ ಹಾಳುಮಾಡಲು ಹಾಗೂ ಆತ್ಮಹತ್ಯೆಗೆ ಪ್ರಚೋದಿಸಲಾಗಿದೆ.
ಮಹಿಳೆ ಮತ್ತು ಇತರ ಆರೋಪಿಗಳು 50 ಲಕ್ಷ ರೂ. ವಸೂಲಿ ಮಾಡಿದ ವಿಚಾರ ಪ್ರಸ್ತಾಪಗೊಂಡಿದೆ. ಮಹಿಳೆ 25 ಲಕ್ಷ ರೂ. ಚೆಕ್ ಮೂಲಕ ಪಡೆದಿದ್ದಾರೆ. ಜೊತೆಗೆ, ರಾಜಕೀಯ ವೈಷಮ್ಯದ ಹಿನ್ನೆಲೆ ಮುಮ್ತಾಜ್ ಅಲಿ ಕುಟುಂಬಕ್ಕೂ ಬೆದರಿಕೆ ಹಾಕಲಾಗಿತ್ತು.
ಈ ಹಿನ್ನೆಲೆಯಲ್ಲಿ, 6 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಅದರಲ್ಲಿ ಮೂರು ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಆರೋಪಿಯ ಮಹಿಳೆ ನಾಪತ್ತೆಯಾಗಿದ್ದು, ಕೇರಳದಲ್ಲಿ ಆಕೆಯ ಲೊಕೇಶನ್ ಪತ್ತೆಯಾಗಿದೆ.ಪಶ್ಚಿಮಘಟ್ಟದ ಹೆಬ್ರಿಯಲ್ಲಿ ಮೇಘಸ್ಫೋಟ: ಓರ್ವ ಬಲಿ
ಮುಮ್ತಾಜ್ ಅಲಿ ಅವರ ಕಾರು ಮಂಗಳೂರಿನ ಕೂಳೂರು ಫಲ್ಗುಣಿ ನದಿ ಸೇತುವೆ ಬಳಿ ಪತ್ತೆಯಾಗಿದ್ದು, ಆತನ ಶವ ನದಿಯಲ್ಲಿ ಶೋಧ ಕಾರ್ಯಾಚರಣೆ ನಂತರ ಪತ್ತೆಯಾಗಿದೆ.
More Stories
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ