ಐಪಿಎಲ್ 20-20ಯ 57ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ 57 ರನ್‌ಗಳ ವಿಜಯ ಸಾಧಿಸಿತು.
ದುಬೈನ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಡಿಸಿ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
ಎಮ್‌ಐ ತಂಡದಿಂದ ರೋಹಿತ್ ಶರ್ಮಾ ಹಾಗೂ ಡಿ. ಕಾಕ್ ಆರಂಭಿಕ ಆಟಗಾರರಾಗಿ ಮೈದಾನಕ್ಕಿಳಿದರು. ಶರ್ಮಾ ಶೂನ್ಯ ಸಂಪಾದನಗೆ ಪೆವಿಲಿಯನ್ ಸೇರಿದರೆ ಕಾಕ್ 25 ಬಾಲ್‌ಗಳಿಗೆ 40 ರನ್ ಗಳಿಸಿದರು. ನಂತರ ಬಂದ ಎಸ್. ಯಾದವ್ 38 ಬಾಲ್‌ಗಳಿಗೆ 51, ಐ. ಕಿಶನ್ 30 ಬಾಲ್‌ಗಳಿಗೆ 55 ರನ್ ಗಳಿಸಿದರು. ಎಮ್‌ಐ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿತು.
ತದನಂತರ ಡಿಸಿ ತಂಡದಿಂದ ಮೈದಾನಕ್ಕಿಳಿದ ಪೃಥ್ವಿ ಶಾ ಹಾಗೂ ಶಿಖರ್ ಧವನ್ ಅವರು ಅತೀ ಕಳಪೆ ಆಟವನ್ನು ಆರಂಭಿಸಿದರು. ಶಾ ಹಾಗೂ ಧವನ್ ಶೂನ್ಯಕ್ಕೇ ಪೆವಿಲಿಯನ್ ಸೇರಿದರು. ನಂತರ ಬಂದ ಎಂ. ಸ್ಟೋಯಿನೀಸ್ ಹಾಗೂ ಎಂ. ಪಟೇಲ್ ಅವರು ತಂಡಕ್ಕೆ ಓಯಸಿಸ್ ರೀತಿ ಆದರೂ ಸಹ ಅವರ ಶ್ರಮ ತಂಡವನ್ನು ಗೆಲ್ಲಿಸುವಲ್ಲಿ ವಿಫಲವಾಯಿತು. ಸ್ಟೋಯಿನೀಸ್ 46 ಬಾಲ್‌ಗಳಿಗೆ 65 ರನ್ ಹಾಗೂ 33 ಬಾಲ್‌ಗಳಿಗೆ 42 ರನ್ ಗಳಿಸಿದರು. ಉಳಿದ ಆಟಗಾರರಿಂದ ಇಂದು ಸಹಕಾರದ ಕೊರತೆ ಎದ್ದು ಕಂಡಿತು. ಡಿಸಿ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿ ಪಂದ್ಯದಲ್ಲಿ ಸೋಲು ಕಂಡಿತು.
- ಓದಿನ ಮಹತ್ವ
- ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
- ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
- ಚುನಾವಣೆಗೂ ಮುನ್ನ ಕೇಜ್ರಿವಾಲ್ ಸಂಕಷ್ಟ – ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಇಡಿಗೆ ರಾಜ್ಯಪಾಲರ ಅನುಮತಿ
- ನೆಲಮಂಗಲ ಟೀ ಬೇಗೂರು ಬಳಿ ಭೀಕರ ಸರಣಿ ಅಪಘಾತ: ಒಂದೇ ಕುಟುಂಬದ 6 ಮಂದಿ ಸಾವು
More Stories
ಓದಿನ ಮಹತ್ವ
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು