December 24, 2024

Newsnap Kannada

The World at your finger tips!

57883d20 eb0b 4095 abc4 751094643e6e

ಮುಂಬೈ ಹೋಟೆಲ್ ನಲ್ಲಿ ಶವವಾಗಿ ಪತ್ತೆಯಾದ ಸಂಸದ ಆತ್ಮಹತ್ಯೆ ಶಂಕೆ?

Spread the love

ಮುಂಬೈನ ದಾದ್ರಾ ಮತ್ತು ನಗರ ಹವೇಲಿ ಸಂಸದ ಮೋಹನ್ ದೇಲ್ಕರ್ (58) ಪಂಚತಾರಾ ಹೋಟೆಲ್ ಒಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ದಕ್ಷಿಣ ಮುಂಬೈನ ಮರೀನ್ ಡ್ರೈವ್ ನಲ್ಲಿರುವ ಸೀ ಗ್ರೀನ್ ಹೊಟೆಲ್ ನಲ್ಲಿ ದೇಲ್ಕರ್ ಅವರ ಮೃತದೇಹ ಪತ್ತೆಯಾಗಿದೆ.

ಗುಜರಾತ್ ಭಾಷೆಯಲ್ಲಿ ಬರೆದಿರುವ ಡೆತ್ ನೋಟ್ ಕೂಡ ಪತ್ತೆಯಾಗಿದೆ. ಸಂಸದರ ಸಾವಿನ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿವೆ.

ದೇಲ್ಕರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ಇದೆ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.

2019ರ ಲೋಕಸಭಾ ಚುನಾವಣೆಗೂ ಮುನ್ನ ದೇಲ್ಕರ್ ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ್ದರು. ದಾದ್ರಾ ಹಾಗೂ ನಗರ್ ಹವೇಲಿ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು.

Copyright © All rights reserved Newsnap | Newsever by AF themes.
error: Content is protected !!