ನನ್ನ ಬಳಿ 19 ಸಿಡಿಗಳಿವೆ ಎಂದು ಹೇಳಿಕೆ ನೀಡಿದ್ದ ಬಳ್ಳಾರಿ ಮೂಲದ ಸಾಮಾಜಿಕ ಕಾರ್ಯಕರ್ತ ರಾಜಶೇಖರ್ ಮುಲಾಲಿಗೆ ಕಬ್ಬನ್ ಪಾಕ್೯ ಠಾಣೆ ನೋಟಿಸ್ ಜಾರಿ ಮಾಡಿದ್ದಾರೆ.
ಕಬ್ಬನ್‌ಪಾರ್ಕ್ ಠಾಣೆ ಪೊಲೀಸರು ರಾಜಶೇಖರ್ ಮುಲಾಲಿಗೆ ಸೋಮವಾರ ಬೆಳಗ್ಗೆ 11ಕ್ಕೆ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಲಾಗಿದೆ.
ಮುಲಾಲಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಠಾಣೆಗೆ ದೂರು ಸಲ್ಲಿಸಲಾಗಿತ್ತು. ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಗೆ ಮಂಡ್ಯದ ಮಾನವ ಹಕ್ಕು ಸೇವಾ ಸಮಿತಿ ಅಧ್ಯಕ್ಷೆ ಇಂದಿರಾ ದೂರು ನೀಡಿದ್ದರು.
ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಲಾಲಿ, 6 ಸಚಿವರು ನ್ಯಾಯಾಲಯದ ಮೊರೆ ಹೋದ ವಿಚಾರವಾಗಿ ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿಕೊಂಡ ರಂತೆ. ತಪ್ಪು ಮಾಡದೆ ಇದ್ದರೆ ಇವರು ಏಕೆ ಹೆದರಬೇಕು ಎಂದು ಮುಲಾಲಿ ಪ್ರಶ್ನೆ ಮಾಡಿದರು.
ಸಿಡಿ ಇದೆ ಎಂದು ಹೇಳೋರನ್ನು ಏರೋಪ್ಲೇನ್ ಹತ್ತಿಸಿ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಮುಲಾಲಿ ತಿರುಗೇಟು ಕೊಟ್ಟು ಏರೋಪ್ಲೇನ್ ಏಕೆ ಬೇರೆ ಏನಾದರು ಇದ್ದರೆ ಹತ್ತಿಸಲಿ. ನಾವೇನು ಚಿತ್ರನಟಿಯನ್ನು ಮದುವೆಯಾಗಿಲ್ಲ. ಅವರು ರಾಜ್ಯದ ದುರಂತ ಮುಖ್ಯಮಂತ್ರಿ ಎಂದು ಜರಿದರು.
More Stories
ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ
ಕಾಂಗ್ರೆಸ್ ಸಚಿವರಿಗೆ ರನ್ಯಾ ರಾವ್ ಕರೆ: ಶಾಸಕ ಭರತ್ ಶೆಟ್ಟಿಯಿಂದ ಗಂಭೀರ ಆರೋಪ