December 19, 2024

Newsnap Kannada

The World at your finger tips!

murug 2

ಎದೆ ನೋವಿನಿಂದ ಕುಸಿದು ಬಿದ್ದ ಮುರುಘಾ ಶ್ರೀಗಳು ಜೈಲಿನಿಂದ ಜಿಲ್ಲಾ ಆಸ್ಪತ್ರೆಗೆ ಶಿಫ್ಟ್

Spread the love

ಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರಿಗೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿದೆ.

ಎದೆ ನೋವಿನಿಂದ ಶ್ರೀಗಳು ಆಸ್ಪತ್ರೆಯಲ್ಲಿ ಕುಸಿದು ಬಿದ್ದ ಹಿನ್ನೆಲೆ ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿದೆ. ಶ್ರೀಗಳಿಗೆ ಸದ್ಯ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ, ECG ತಪಾಸಣೆ ಮಾಡಲಾಗುತ್ತಿದೆ.

ಬಿಜೆಪಿ MLC ಎಚ್. ವಿಶ್ವನಾಥ್ ಮತ್ತೆ ಕಾಂಗ್ರೆಸ್ ಸೇರುವ ಸುಳಿವು

ಜೈಲಿಗೆ ಶಿಫ್ಟ್​ ಮಾಡಲಾದ ಬಳಿಕ ಶ್ರೀಗಳನ್ನು ಬೆಳಗಿನ ಜಾವ 3 ಗಂಟೆಯಿಂದ ನಿದ್ದೆ ಮಾಡಲೇ ಇಲ್ಲ ,ಶ್ರೀಗಳನ್ನು ಜೈಲಿನಲ್ಲಿರುವ ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿತ್ತು. ಯಾರೊಂದಿಗೂ ಮಾತಾಡದೇ ಮೌನವಾಗಿದ್ದರಂತೆ. ಬೆಳಗ್ಗೆ ಒಂದು ಲೋಟ ಹಾಲನ್ನು ಮಾತ್ರ ಸ್ವೀಕರಿಸಿದ್ದರು.

ಮುರುಘಾ ಶರಣರ ವಿರುದ್ಧ ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಆಗಸ್ಟ್​ 26 ರಂದು ಪ್ರಕರಣ ದಾಖಲಾಗಿತ್ತು. ಚಿತ್ರದುರ್ಗದ ಮುರುಘಾಮಠದ ಅಧೀನದಲ್ಲೇ ಬರುವ ಹಾಸ್ಟೆಲ್​ ವಿದ್ಯಾರ್ಥಿನಿಯರಿಬ್ಬರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ದೂರಿದ್ದರು.

ಪೋಕ್ಸೋದಂತಹ ಗಂಭೀರ ಪ್ರಕರಣ ದಾಖಲಾಗಿದ್ದರೂ ಸಹ ಪ್ರಮುಖ ಆರೋಪಿಯಾಗಿದ್ದ ಮುರುಘಾ ಶರಣರನ್ನು ಬಂಧನ ಮಾಡುವಲ್ಲಿ ಪೊಲೀಸರು ವಿಳಂಬ ನೀತಿ ಅನುಸರಿಸಿದ್ದೂ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಮಧ್ಯೆ ನಿನ್ನೆ ರಾತ್ರಿ 10.10ರ ಸುಮಾರಿಗೆ ಮುರುಘಾ ಶರಣರು ಸ್ವತಃ ಶರಣಾಗಿದ್ದಾರೆ. ಬಳಿಕ ಶ್ರೀಗಳನ್ನು ಬಂಧಿಸಲಾಗಿತ್ತು.

Copyright © All rights reserved Newsnap | Newsever by AF themes.
error: Content is protected !!