ಹೆಜ್ಜಾಲದಿಂದ ಚಾಮರಾಜನಗರದ ವರೆಗಿನ ರೈಲು ಯೋಜನೆ ಗೆ ಶೀಘ್ರವಾಗಿ ಚಾಲನೆ ನೀಡುವಂತೆ ಸಂಸದೆ ಸುಮಲತಾ ಸಂಸತ್ ಅಧಿವೇಶನದಲ್ಲಿ ಒತ್ತಾಯಿಸಿ ದರು.
ಹೆಜ್ಜಾಲದಿಂದ ಕನಕಪುರ , ಮಳವಳ್ಳಿ , ಕೊಳ್ಳೆಗಾಲ ಮಾರ್ಗವಾಗಿ ಚಾಮರಾಜನಗರ ರೈಲು ಯೋಜನೆಗೆ ಬೇಗ ಚಾಲನೆ ನೀಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.
ನೆನೆಗುದಿಗೆ ಬಿದ್ದ ರೈಲು ಯೋಜನೆಗಿರುವ ಅಡೆತಡೆ ನಿವಾರಿಸಲು ಪ್ರಸ್ತಾಪ ಮಾಡಿದರು.
ರಾಮನಗರ ಜಿಲ್ಲೆಯ ಹೆಜ್ಜಾಲದಿಂದ ಚಾಮರಾಜನಗರಕ್ಕೆ ಸಂಪರ್ಕ ಕಲ್ಪಿಸುವ ರೈಲು ಮಾರ್ಗದ ಬಗ್ಗೆ ಎರಡೂವರೆ ವರ್ಷದ ಹಿಂದೆಯೇ ಘೋಷಣೆ ಆಗಿದೆ. ಇನ್ನೂ ಈ ಯೋಜನೆ ಗೆ ಚಾಲನೆ ಸಿಕ್ಕಿಲ್ಲ. ಯಾಕೆ ವಿಳಂಬ ಆಗುತ್ತಿದೆ ಎಂದು ಪ್ರಶ್ನೆ ಮಾಡಿದರು.
ಈಗ ರಾಜ್ಯ ಹಾಗೂ ಕೇಂದ್ರದಲ್ಲಿ ಒಂದೇ ಪಕ್ಷ ಆಡಳಿತದಲ್ಲಿ ಇದೆ. ಯಾವುದೇ ಅಡೆತಡೆ ಇದ್ದರು ಸುಲಭವಾಗಿ ನಿವಾರಣೆ ಮಾಡಬಹುದು. ಆದ್ದರಿಂದ, ಬಹುನಿರೀಕ್ಷಿತ ರೈಲು ಯೋಜನೆ ಕಾರ್ಯರೂಪಕ್ಕೆ ತರಬೇಕೆಂದು ಸುಮಲತಾ ಸಂಸತ್ತಿನಲ್ಲಿ ಒತ್ತಾಯಿಸಿದರು.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ