April 15, 2025

Newsnap Kannada

The World at your finger tips!

, suicide, harrasment , crime

ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು

Spread the love

ಹಾಸನ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾಯಿ-ಮಗ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಕಬ್ಬಳಿ ಗ್ರಾಮದಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡವರು ಜಯಂತಿ (60) ಮತ್ತು ಅವರ ಪುತ್ರ ಭರತ್ (35) ಎಂದು ಗುರುತಿಸಲಾಗಿದೆ. ಭರತ್ ಕಳೆದ ಎಂಟು ತಿಂಗಳ ಹಿಂದೆ ಅರಸೀಕೆರೆ ತಾಲ್ಲೂಕಿನ ಬಾಗೂರನಹಳ್ಳಿ ಗ್ರಾಮದ ಯುವತಿಯೊಂದಿಗೆ ವಿವಾಹವಾಗಿದ್ದರು. ಆದರೆ, ಅತ್ತೆ-ಸೊಸೆ ನಡುವೆ ತೊಡಕಿನ ಸಂಬಂಧ ಇದ್ದು, ಪದೇಪದೇ ಜಗಳವಾಗುತ್ತಿತ್ತು.

ಈ ಕಾರಣದಿಂದ ಭರತ್ ಪತ್ನಿ ಗಂಡನ ಜೊತೆ ಇರಲು ನಿರಾಕರಿಸಿ ತವರು ಮನೆಗೆ ಹೋಗಿದ್ದರು. ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಹಲವು ಬಾರಿ ಮಧ್ಯಸ್ಥಿಕೆ ನಡೆಸಿ ರಾಜಿ ಪಡಿಸಲು ಪ್ರಯತ್ನಿಸಿದರೂ, ಸಮಾಧಾನಕಾರಿ ಪರಿಹಾರ ಸಿಗದೆ, ಪತ್ನಿ ಗಂಡನ ಮನೆಗೆ ಮರಳಲು ನಿರಾಕರಿಸಿದ್ದರು.ಇದನ್ನು ಓದಿ -ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ

ಇದರಿಂದ ಮನನೊಂದ ಭರತ್ ಹಾಗೂ ತಾಯಿ ಜಯಂತಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯ ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಹಿರಿಸಾವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Copyright © All rights reserved Newsnap | Newsever by AF themes.
error: Content is protected !!