January 4, 2025

Newsnap Kannada

The World at your finger tips!

sujath ramesh

ಮಂಡ್ಯದಲ್ಲಿ ಕೊರೋನಾಗೆ ತಾಯಿ ಬಲಿ: ಸುದ್ದಿ ತಿಳಿದ ಮಗನೂ ಹೃದಯಾಘಾತದಿಂದ ಸಾವು

Spread the love

ಕೊರೋನಾ ಸೋಂಕಿಗೊಳಗಾಗಿದ್ದ ತಾಯಿಯೊಬ್ಬಳು ಸಾವನ್ನಪ್ಪಿದರೆ, ತಾಯಿಯ ಬಗ್ಗೆ ಯೋಚಿಸಿದ ಮಗ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಮಂಡ್ಯದಲ್ಲಿ ಜರುಗಿದೆ.

ಮಂಡ್ಯದ ಸುಭಾಷ್‌ನಗರದ ನಿವಾಸಿ ಸುಜಾತಾ ಹಾಗೂ ಆಕೆಯ ಪುತ್ರ ಸಿ.ಎನ್.ರಮೇಶ್ ಮೃತಪಟ್ಟವರು.

ಸುಜಾತಾ ಮೇ 7 ರಂದು ಕರೋನ‌ ಸೋಂಕಿನ ಲಕ್ಷಣಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಜಿಲ್ಲಾಸ್ಪತ್ರೆ, ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಕೀಲಾರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು.

ಕಳೆದೆರಡು ದಿನಗಳ ಹಿಂದೆ ಸುಜಾತಾ ಅವರಿಗೆ ಸೋಂಕು ಉಲ್ಬಣಿಸಿ ಉಸಿರಾಟದ ಸಮಸ್ಯೆಯಾಯಿತು.‌ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ 8 ಗಂಟೆ ಸಮಯಕ್ಕೆ ಕೊನೆಯುಸಿರೆಳೆದರು.

ತಾಯಿ ಸೋಂಕಿಗೆ ಒಳಗಾಗಿ ಆಸ್ಪತ್ರೆ ಸೇರಿದ ಹಿನ್ನೆಲೆಯಲ್ಲಿ ಮಗ ಸಿ.ಎನ್.ರಮೇಶ್ ಕೂಡ ಮಾನಸಿಕವಾಗಿ ಕುಗ್ಗಿಹೋಗಿದ್ದರು. ತಾಯಿಯನ್ನು ನೆನೆದು ಊಟವನ್ನೂ ಬಿಟ್ಟುಬಿಟ್ಟಿದ್ದರು. ಅಂತಿಮವಾಗಿ ತಾಯಿ ಸಾವನ್ನಪ್ಪಿದ ಕೆಲವು ಕ್ಷಣಗಳಲ್ಲೇ ಅವರ ನಿವಾಸದಲ್ಲೇ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದರು.‌

Copyright © All rights reserved Newsnap | Newsever by AF themes.
error: Content is protected !!