January 29, 2026

Newsnap Kannada

The World at your finger tips!

WhatsApp Image 2021 11 13 at 4.35.14 PM

ತಾಯಿಯ 4 ಕೋಟಿ ರು ಚಿನ್ನಾಭರಣ ಕಳವು ಮಾಡಿಕೊಂಡ ಪರಾರಿಯಾದ ಮಗಳು – ತಾಯಿ ದೂರು

Spread the love

ತಾಯಿ ಮನೆಯಲ್ಲಿಯೇ ಕೋಟ್ಯಂತರ ಮೌಲ್ಯದ ಚಿನ್ನಾಭರಣವನ್ನು ಮಗಳು ಕಳವು ಮಾಡಿಕೊಂಡು ಪರಾರಿಯಾದ
ಪ್ರಕರಣ ಜೆಪಿ ನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತಾಯಿ ವಿಜಯಲಕ್ಷ್ಮಿ ನನ್ನ ಮಗಳು ತೇಜವಂತಿ ನಾಲ್ಕು ಕೋಟಿ ಮೌಲ್ಯದ ಏಳೂವರೆ ಕೆಜಿ ವಜ್ರ ಹಾಗೂ ಚಿನ್ನಾಭರಣ ವಂಚಿಸಿದ್ದಾಳೆ ಎಂದು ದೂರು ನೀಡಿದ್ದಾರೆ.

ಕೆಲ ದಿನಗಳ ಹಿಂದೆ ವಿಜಯಲಕ್ಷ್ಮಿ ಅವರು ಆಪರೇಶನ್ ಗೆ ಒಳಗಾಗಿದ್ದು, ಈ ವೇಳೆ ಮನೆಗೆ ಬಂದ ತೇಜವಂತಿ ತಾಯಿಗೆ ತಿಳಿಯದಂತೆ ಚಿನ್ನಾಭರಣ ತೆಗೆದುಕೊಂಡು ಹೋಗಿದ್ದಾಳೆ.

ನಂತರ ಚಿನ್ನಾಭರಣವನ್ನು ಲಾಕರ್ ನಲ್ಲಿ ಇಟ್ಟಿರುವುದಾಗಿ ನಂಬಿಸಿದ್ದಾಳೆ. ಆದರೆ ಈಗ ತೇಜವಂತಿ ಚಿನ್ನಾಭರಣಗಳ ಜೊತೆಗೆ ನಾಪತ್ತೆಯಾಗಿದ್ದಾಳೆ
ಈ ಸಂಬಂಧ ಜೆಪಿ ನಗರ ಪೊಲೀಸ್ ಠಾಣೆಗೆ ವಿಜಯಲಕ್ಷ್ಮಿ ದೂರು ನೀಡಿದ್ದಾರೆ.

ಜೆಪಿ ನಗರ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.

error: Content is protected !!