April 11, 2026

Newsnap Kannada

The World at your finger tips!

crime,murder,women

ಸಾಂಬಾರು ಚೆನ್ನಾಗಿಲ್ಲ ಎಂದು ಗಲಾಟೆ : ಅಮ್ಮ,ತಂಗಿಯನ್ನು ಗುಂಡಿಟ್ಟು ಹತ್ಯೆ ಮಾಡಿದ ಪಾಪಿ

Spread the love

ಸಾಂಬಾರು ಚೆನ್ನಾಗಿಲ್ಲ ಎಂಬ ವಿಷಯಕ್ಕೆ ಗಲಾಟೆ ಆರಂಭಿಸಿ ರೊಚ್ಚಿಗೆದ್ದ ಮಗನೊಬ್ಬ ಹೆತ್ತ ಅಮ್ಮ ಹಾಗೂ ತಂಗಿಯನ್ನೇ ನಾಡಬಂದೂಕಿನಿಂದ ಗುಂಡು ಹಾರಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ದೊಡ್ಮನೆ ಗ್ರಾಮದ ಕುಡಗೋಡಿನಲ್ಲಿ ಜರುಗಿದೆ.

ಪಾರ್ವತಿ ನಾರಾಯಣ ಹಸ್ಲರ್ (42), ರಮ್ಯಾ ನಾರಾಯಣ ಹಸ್ಲರ್(19) ಹತ್ಯೆಯಾದ ದುರ್ದೈವಿಗಳು. ಮಂಜುನಾಥ ಹಸ್ಲರ್ (24) ಕೊಲೆ ಮಾಡಿದ ಆರೋಪಿ.

ಮನೆಯಲ್ಲಿ ಮಾಡಿದ್ದ ಸಾಂಬಾರು ಚೆನ್ನಾಗಿಲ್ಲ ಎಂದು ಆರೋಪಿ ಕ್ಯಾತೆ ತೆಗೆದು ಮನೆಯಲ್ಲಿದ್ದ ನಾಡ ಬಂದೂಕು ತೆಗೆದುಕೊಂಡು ಇಬ್ಬರ ಮೇಲೂ ಗುಂಡು ಹಾರಿಸಿದ್ದಾನೆ.

ಮಂಜುನಾಥ ಮದ್ಯ ವ್ಯಸನಿಯಾಗಿದ್ದ. ಆರೋಪಿ ಮಂಜುನಾಥ್ ವಿರುದ್ಧ ತಂದೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

error: Content is protected !!