December 19, 2024

Newsnap Kannada

The World at your finger tips!

ASI , crime , gold

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 9 ಕೆಜಿಗೂ ಹೆಚ್ಚು ಚಿನ್ನ ವಶಕ್ಕೆ

Spread the love

ಬೆಂಗಳೂರು: ಕೆಐಎಯಲ್ಲಿ 5 ಗಂಟೆಗಳಲ್ಲಿ ಮೂರು ವಿಭಿನ್ನ ಪ್ರಕರಣಗಳಲ್ಲಿ 9 ಕೆಜಿಗೂ ಹೆಚ್ಚು ಕಳ್ಳಸಾಗಣೆಯಾದ ಚಿನ್ನವನ್ನು ಬೆಂಗಳೂರಿನ ಕಂದಾಯ ಗುಪ್ತಚರ ನಿರ್ದೇಶನಾಲಯದ (DRI) ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಫೆಬ್ರವರಿ 1 ರಂದು ಶಾರ್ಜಾದಿಂದ ಹೊರಟಿದ್ದ ವಿಮಾನವನ್ನು ಶೋಧಿಸಿದಾಗ 3.75 ಕೆಜಿ ವಿದೇಶಿ ಮೂಲದ ಚಿನ್ನದ ಗಟ್ಟಿಯನ್ನು ಡಿಆರ್ ಐ ಅಧಿಕಾರಿಗಳು ವಶಕ್ಕೆ ಪಡೆದು, ಮಹಿಳೆ ಸೇರಿದಂತೆ ಆರು ಮಂದಿ ಭಾರತೀಯರನ್ನು ಬಂಧಿಸಲಾಗಿದೆ.

ಚಿನ್ನದ ಗಟ್ಟಿಯನ್ನು ಲಗೇಜ್ ಕ್ಯಾಬಿನ್ನಲ್ಲಿ ಸಾಗಿಸಲಾಗುತಿತ್ತು ಎಂದು ತಿಳಿದುಬಂದಿದೆ.

ಎರಡನೇ ಪ್ರಕರಣ :

ಕೌಲಾಲಂಪುರದಿಂದ ಬಂದ ಮಲೇಷ್ಯಾ ಏರ್ಲೈನ್ಸ್ ವಿಮಾನದಲ್ಲಿ ಬ್ಬರು ಪ್ರಯಾಣಿಕರನ್ನು ತಡೆದ ಡಿಆರ್ಐ ಅಧಿಕಾರಿಗಳು ಅವರಿಂದ1.55 ಕೋಟಿ ಮೌಲ್ಯದ 2,854 ಗ್ರಾಂ ತೂಕದ ಪೇಸ್ಟ್ ರೂಪದ ಚಿನ್ನವನ್ನು ಪತ್ತೆ ಹಚ್ಚಿದ್ದಾರೆ.

ಶೂ ಸಾಕ್ಸ್ ನಲ್ಲಿ ಆರೋಪಿಗಳು ಚಿನ್ನ ಸಾಗಿಸುತ್ತಿದದ್ದು ಕಂಡುಬಂದಿದ್ದು , ಇಬ್ಬರನ್ನು ಬಂಧಿಸಲಾಗಿದೆ.

ಮೂರನೇ ಪ್ರಕರಣ :

ಅದೇ ಮಲೇಷ್ಯಾ ಏರ್ಲೈನ್ಸ್ ವಿಮಾನದಲ್ಲಿ ಕೌಲಾಲಂಪುರದಿಂದ ಬಂದಿಳಿದ ನಾಲ್ವರು ಪ್ರಯಾಣಿಕರನ್ನು ಡಿಆರ್ಐ ಅಧಿಕಾರಿಗಳು ತಡೆದು ,ಒಳ ಉಡುಪಿನಲ್ಲಿ ಸಾಗಿಸಲಾಗುತ್ತಿದ್ದ 1.42 ಕೋಟಿ ಮೌಲ್ಯದ 2,632 ಗ್ರಾಂ ತೂಕದ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.ಸಂಸತ್‌ ನಲ್ಲಿ ಕೈಜೋಡಿಸಿ , ಮೇಕೆದಾಟು ಯೋಜನೆಗೆ ಒಪ್ಪಿಗೆ ಕೊಡಿ ಎಂದು ಮನವಿ ಮಾಡಿದ ಹೆಚ್‌ ಡಿ ದೇವೇಗೌಡ 

ಇದಲ್ಲದೆ 73.7 ಲಕ್ಷ ರೂಪಾಯಿ ಮೌಲ್ಯದ 3,510 ಇ-ಸಿಗರೇಟ್ಗಳನ್ನು ವಶಪಡಿಸಿಕೊಂಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!