ಪ್ರಮುಖ ಆಲೂಗೆಡ್ಡೆ ಚಿಪ್ಸ್ ಬ್ರ್ಯಾಂಡ್ ‘ಲೇಸ್‘ ನ ಪೋಷಕ ಕಂಪನಿ ಪೆಪ್ಸಿಕೋಗೆ ತ್ರಿಸ್ಸೂರ್ ಲೀಗಲ್ ಮೆಟ್ರೊಲಜಿ ಆಫೀಸ್ 85 ಸಾವಿರ ರೂಪಾಯಿ ದಂಡ ವಿಧಿಸಿದೆ. ಪ್ಯಾಕೆಟ್‌ನಲ್ಲಿ ಹೆಚ್ಚಿನ ಗಾಳಿ ಇದೆ ಎಂಬ ಕಾರಣದ ಜತೆಗೆ ಮತ್ತೊಂದು ಅಂಶವೇನೆಂದರೆ, ಪ್ಯಾಕೆಟ್ ಮೇಲೆ ಬರೆಯಲಾದ ಆಹಾರದ ಪ್ರಮಾಣಕ್ಕೂ ಮತ್ತು ಪ್ಯಾಕೆಟ್ ಒಳಗಿರುವ ಆಹಾರ ಪ್ರಮಾಣಕ್ಕೂ ತಾಳೆ ಇಲ್ಲ.
ಇದನ್ನು ಓದಿ –ಪ್ರಾಯೋಗಿಕ ಹಂತ : ವಾರಕ್ಕೆ ನಾಲ್ಕೇ ದಿನ ಕೆಲಸ
ಜಯಶಂಕರ್ ಅವರು ತೆಗೆದುಕೊಂಡಿದ್ದ ಲೇಸ್ ಪ್ಯಾಕೆಟ್‌ನಲ್ಲಿ ಬರೆದಿದ್ದ ಆಹಾರದ ಪ್ರಮಾಣಕ್ಕಿಂತ ಪ್ಯಾಕೆಟ್ ಒಳಗಿದ್ದ ಚಿಪ್ಸ್ ಪ್ರಮಾಣ ತುಂಬಾ ಕಡಿಮೆ ಇತ್ತು. ಜಯಶಂಕರ್ ತೆಗೆದುಕೊಂಡಿದ್ದ ಪ್ಯಾಕೆಟ್ ಮೇಲೆ 115 ಗ್ರಾಂ ಎಂದು ಬರೆಯಲಾಗಿತ್ತು. ಆದರೆ, ಅದರ ಒಳಗಿದ್ದ ಚಿಪ್ಸ್ ಪ್ರಮಾಣ ಅರ್ಧಕರ್ಧ ವ್ಯತ್ಯಾಸವಿತ್ತು ಎಂದು ಜಯಶಂಕರ್ ಹೇಳಿದ್ದಾರೆ.
ದೂರು ನೀಡಿದ ಬಳಿಕ ತನಿಖೆಯ ವೇಳೆ ಮೂರು ಲೇಸ್ ಪ್ಯಾಕೆಟ್ಗಳನ್ನು ಪರಿಶೀಲಿಸಿದಾಗ ಆಘಾತಕಾರಿ ಅಂಕಿ-ಅಂಶದ ಜತೆಗೆ ಗ್ರಾಹಕರಿಗೆ ಯಾವ ರೀತಿಯಲ್ಲಿ ವಂಚನೆ ಮಾಡುತ್ತಿದ್ದಾರೆ ಎಂಬುದು ಬೆಳಕಿಗೆ ಬಂದಿದೆ. 115 ಗ್ರಾಂ ಎಂದು ಬರೆದಿದ್ದ ಮೂರು ಚಿಪ್ಸ್ ಪ್ಯಾಕೆಟ್‌ನಲ್ಲಿ ಒಂದರಲ್ಲಿ 50.930 ಗ್ರಾಂ, ಮತ್ತೊಂದರಲ್ಲಿ 72.730 ಗ್ರಾಂ ಮತ್ತು ಇನ್ನೊಂದು ಪ್ಯಾಕೆಟ್‌ನಲ್ಲಿ 86.380 ಗ್ರಾಂ ಲೇಸ್ ಇರುವುದು ಕಂಡುಬಂದಿತು.
ತ್ರಿಸ್ಸೂರ್ನ ಕಂಜನಿ ಏರಿಯಾದ ಸೂಪರ್ ಮಾರ್ಕೆಟ್ನಲ್ಲೂ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಈ ವೇಳೆ ಪ್ರಮಾಣದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ತ್ರಿಸ್ಸೂರ್ ಲೀಗಲ್ ಮೆಟ್ರೊಲಜಿ ಆಫೀಸ್ ಕ್ರಮ ಕೈಗೊಂಡಿದೆ.
ಆಲೂಗೆಡ್ಡೆ ಚಿಪ್ಸ್ ತಿನ್ನುವ ಬಹುತೇಕರು ಅದರ ಪ್ಯಾಕೆಟ್ ನೋಡಿ ಚಿಪ್ಸ್‌ಗಿಂತ ಅದರಲ್ಲಿರುವ ಗಾಳಿಯೇ ಜಾಸ್ತಿ ಇದೆ ಎಂದು ಗೊಣಗಿಕೊಂಡಿರುತ್ತಾರೆ. ಆದರೂ, ಚಿಪ್ಸ್ ತಿನ್ನುವುದರಲ್ಲಿ ಯಾರೂ ಹಿಂದಿ ಬಿದ್ದಿಲ್ಲ. ಹೀಗಾಗಿಯೇ ಅನೇಕ ಬ್ರ್ಯಾಂಡ್ ಹೆಸರಿನ ಚಿಪ್ಸ್ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ