February 22, 2026

Newsnap Kannada

The World at your finger tips!

k mahadevu

ಆಂಬ್ಯೂಲೆನ್ಸ್ ಸಿಬ್ಬಂದಿಗಳಿಂದ ಹಣ ಸುಲಿಗೆ ಅಕ್ಷಮ್ಯ; ಪಿರಿಯಾಪಟ್ಟಣದ ಶಾಸಕ ಕೆ.ಮಹದೇವು

Spread the love

ತುರ್ತು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಲು ಆಂಬ್ಯೂಲೆನ್ಸ್ ಮೂಲಕ ಬರುವ ಬಡರೋಗಿಗಳಿಂದ ಆಂಬ್ಯೂಲೆನ್ಸ್ ಡ್ರೈವರ್ ಹಾಗೂ ಸಿಬ್ಬಂದಿಗಳು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಪಿರಿಯಾಪಟ್ಟಣ ಶಾಸಕ ಕೆ.ಮಹದೇವು ಅಸಮಾಧಾನ ವ್ಯಕ್ತಪಡಿಸಿದರು.

ಸೋಮವಾರ ಮೈಸೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಬಡವರಿಂದ ಇಂಧನ ಖರ್ಚಿಗೆ ಹಣ ನೀಡಬೇಕೆಂದು ಆಂಬ್ಯೂಲೆನ್ಸ್ ಸಿಬ್ಬಂದಿಗಳು ಸುಲಿಗೆ ಮಾಡಿತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಹೇಳಿದರು.

ಈ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಟಿ.ಅಮರನಾಥ್ ಪ್ರತಿಕ್ರಿಯಿಸಿ, ಕೂಡಲೇ ಕ್ರಮವಹಿಸಲಾಗುವುದು ಎಂದರು.

error: Content is protected !!