ಹೈದರಾಬಾದ್: ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರು ತೆಲಂಗಾಣದಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ (DSP) ಅಧಿಕಾರ ಸ್ವೀಕರಿಸಿದ್ದಾರೆ.
2024ರಲ್ಲಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಕ್ರಿಕೆಟರ್ ಸಿರಾಜ್ ಮತ್ತು ಬಾಕ್ಸರ್ ನಿಖಾತ್ ಝರೀನ್ ಅವರ ಕ್ರೀಡಾ ಸಾಧನೆಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಗ್ರೂಪ್ 1 ಹುದ್ದೆಯನ್ನು ನೀಡುವುದಾಗಿ ಘೋಷಣೆ ಮಾಡಿದ್ದರು.
ಆ ಘೋಷಣೆಯ ಅನುಸಾರ ಸಿರಾಜ್ ಅಧಿಕೃತವಾಗಿ ಡಿಎಸ್‌ಪಿಯಾಗಿ ನೇಮಕಗೊಂಡಿದ್ದಾರೆ.
ಈ ಸಮಾರಂಭದಲ್ಲಿ ಸಂಸದ ಎಂ. ಅನಿಲ್ ಕುಮಾರ್ ಯಾದವ್ ಮತ್ತು ಮತ್ತೋರ್ವ ಸಂಸದ ಮೊಹಮ್ಮದ್ ಫಾಹೀಮುದ್ದೀನ್ ಖುರೇಶಿ ಉಪಸ್ಥಿತರಿದ್ದರು.
ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಘೋಷಣೆಯ ನಂತರ, ತೆಲಂಗಾಣ ಸರ್ಕಾರವು 1994ರ ಸಾರ್ವಜನಿಕ ಸೇವೆಗಳ ನೇಮಕಾತಿ ಕಾಯ್ದೆಯನ್ನು ತಿದ್ದುಪಡಿ ಮಾಡಿತ್ತು. ಸಿರಾಜ್ ಅವರು ಟಿ20 ವಿಶ್ವಕಪ್ ತಂಡದ ಪ್ರಮುಖ ಸದಸ್ಯರಾಗಿರುವುದರಿಂದ, ಅವರಿಗೆ ಈ ಗೌರವವನ್ನು ಸಲ್ಲಿಸಲಾಗಿದೆ.ಇದನ್ನು ಓದಿ –ಮೈಸೂರಿನಿಂದ ದರ್ಬಾಂಗ್‌ಗೆ ತೆರಳುತ್ತಿದ್ದ ರೈಲು ಅಪಘಾತ; ಹಲವರಿಗೆ ಗಾಯ
ತಮ್ಮ ಕ್ರಿಕೆಟ್ ವೃತ್ತಿ ಮುಂದುವರಿಸುತ್ತಿರುವ ಸಿರಾಜ್ ಅವರ DSP ಹುದ್ದೆ, ಹೊಸ ಜವಾಬ್ದಾರಿಯನ್ನು ಭರಿಸುವ ನಿಟ್ಟಿನಲ್ಲಿ ಹಲವರಿಗೆ ಪ್ರೇರಣೆಯಾಗಲಿದೆ ಎಂದು ತೆಲಂಗಾಣ ಪೊಲೀಸರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
More Stories
ಬೊಲೆರೋ ಡಿಕ್ಕಿಯಿಂದ ಐವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ
ಗೃಹಲಕ್ಷ್ಮಿ ಯೋಜನೆ ಸ್ಥಗಿತ ಮಾಡುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇತಿಹಾಸ ಸೃಷ್ಟಿಸಲಿದೆ: ಸಚಿವ ಚಲುವರಾಯಸ್ವಾಮಿ