January 10, 2025

Newsnap Kannada

The World at your finger tips!

ulalla

ನೇಣು ಬಿಗಿದ ಸ್ಥಿತಿಯಲ್ಲಿ ಮಾಡ್ಲಿಂಗ್ ಸುಂದರಿ ಶವಪತ್ತೆ

Spread the love

ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಯುವತಿಯೋರ್ವಳ ಶವ ಪತ್ತೆಯಾಗಿರುವ ಘಟನೆ ಮಂಗಳೂರಿನ ಉಲ್ಲಾಳ ಸಮೀಪದ ಕುಂಪಲದಲ್ಲಿ ನಡೆದಿದೆ.

ಕುಂಪಲ ಆಶ್ರಯಕಾಲನಿಯ ಚಿತ್ತಪ್ರಸಾದ್ ಅವರ ಪುತ್ರಿ ಪ್ರೇಕ್ಷಾ(17)
ಸಾವನ್ನಪ್ಪಿದ್ದಾರೆ.

ಮಂಗಳೂರು ನಂತೂರು ಬಳಿಯ ನಿಟ್ಟೆ ಪಿಯುಸಿ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿನಿ ಪ್ರೇಕ್ಷಾ ಇಂದು ರಜೆ ಪಡೆದುಕೊಂಡು ಮನೆಯಲ್ಲೇ ಇದ್ದರು.

ತಾಯಿ ಅಂಗನವಾಡಿ ಕೆಲಸಕ್ಕೆ ಹೋಗಿದ್ದ ಸಂದರ್ಭ ಮನೆಗೆ ಮೂವರು ಬಂದು ಹೋಗಿದ್ದರು ಎನ್ನಲಾಗಿದೆ .ಮಧ್ಯಾಹ್ನ ವೇಳೆ ಊಟಕ್ಕೆಂದು ಮನೆಗೆ ಬಂದ ಸಂದರ್ಭ ಕೋಣೆಯೊಳಗೆ ಪ್ರೇಕ್ಷಾಲ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮನೆಗೆ ಬಂದ ಮೂವರು ಯಾರು ?:

ಪ್ರೇಕ್ಷಾ ಮಾಡ್ಲಿಂಗ್ ನಲ್ಲಿ ಆಸಕ್ತಿ ಹೊಂದಿದ್ದು ಇಂದು ಫೋಟೋ ಶೂಟ್ ಗಾಗಿ ಬೆಂಗಳೂರಿಗೆ ತೆರಳಲು ಸಿದ್ಧತೆ ನಡೆಸಿದ್ದಳು. ಆ ಕಾರಣಕ್ಕಾಗಿಯೇ ಕಾಲೇಜಿಗೆ ರಜೆ ಪಡೆದುಕೊಂಡಿದ್ದಳು. ಆದರೆ ಆಕೆಯ ಶವ ಪತ್ತೆಯಾಗಿರುವುದರಿಂದ ಮನೆಗೆ ಬಂದಿದ್ದ ಮೂವರ ಮೇಲೆ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

ಸ್ಥಳೀಯರು ಕೊಲೆ ಎಂದು ಶಂಕೆಯನ್ನು ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಉಳ್ಳಾಲ ಠಾಣಾ ಪೊಲೀಸರು ಭೇಟಿ ನೀಡಿ, ತನಿಖೆ ನಡೆಸುತ್ತಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!