November 23, 2024

Newsnap Kannada

The World at your finger tips!

school

ಸಪ್ತಪದಿ ತುಳಿದು ಪರೀಕ್ಷೆ ಬರೆದ ಮಧುಮಗಳು! ಮಾದರಿಯಾದ STG ಕಾಲೇಜ್ ವಿದ್ಯಾರ್ಥಿನಿ

Spread the love

ಯುವತಿಯ ನಡೆಗೆ ಎಲ್ಲೆಡೆ ಮೆಚ್ಚುಗೆ ಸಪ್ತಪದಿ ತುಳಿದು, ನವ ಜೀವನಕ್ಕೆ ಕಾಲಿಟ್ಟ ಮರುಕ್ಷಣವೇ ಬುಧವಾರ ಮಧುಮಗಳೊಬ್ಬಳು ನೇರವಾಗಿ ಕಾಲೇಜಿಗೆ ಬಂದು ಪರೀಕ್ಷೆ ಬರೆದ ಪ್ರಸಂಗ ಜರುಗಿದೆ.

ಇದನ್ನು ಓದಿ : SSLC ಪೇಲ್‌ ಕಡಿಮೆ ಮಾಡಲು ಶೇ 10 ರಷ್ಟು ಗ್ರೇಸ್ ಮಾರ್ಕ್ಸ್ : ಸರ್ಕಾರದ ನಿರ್ಧಾರ

ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದ STG ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿನಿ ಎಲ್.ವೈ.ಐಶ್ವರ್ಯ (ತೇಜಸ್ವಿನಿ) ತಾಳಿ ಕಟ್ಟಿಸಿಕೊಂಡು ನೇರವಾಗಿ ಪರೀಕ್ಷೆಗೆ ​ಬರೆದು ಬೆರಗು ಮೂಡಿಸಿದರು.

ಲಿಂಗಪುರ ಗ್ರಾಮದ ಕಮಲಾ ಮತ್ತು ಯೋಗೇಂದ್ರ ಪುತ್ರಿ ಐಶ್ವರ್ಯಾ ಹಾಗೂ ಮೈಸೂರು ತಾಲೂಕು ಲಕ್ಷ್ಮೀಪುರ ಗ್ರಾಮದ ಭಾಗ್ಯಲಕ್ಷ್ಮೀ ಮತ್ತು ಸೋಮಶೇಖರ್​ ಅವರ ಪುತ್ರ ಎಲ್​.ಎಸ್​.ಯಶ್ವಂತ್​ ಅವರ ವಿವಾಹ ಪಾಂಡವಪುರದ ಟಿಎಪಿಸಿಎಂಎಸ್​ ಕಲ್ಯಾಣ ಮಂಟಪದಲ್ಲಿ ಬುಧವಾರ ನೆರವೇರಿತು.

ಆದರೆ ಇದೇ ದಿನ ಬಿಕಾಂ ಪ್ರಥಮ ವರ್ಷದ ಡಿಜಿಟಲ್​ ಫ್ಲೂಯೆನ್ಸಿ ವಿಷಯ ಪರೀಕ್ಷೆ ಇತ್ತು . ಹೀಗಾಗಿ ಧಾರೆ ಮುಗಿದ ತಕ್ಷಣ ನವವಧು ಹಿರಿಯರ ಅನುಮತಿ ಪಡೆದು ಪರೀಕ್ಷೆಗೆ ಹಾಜರಾದರು.

ಐಶ್ವರ್ಯಳ ಮದುವೆ ಇಂದು ಅವಿನಾಶ್ ಎಲ್.ಎಸ್ ಜೊತೆಗೆ ಬೆಳಗ್ಗೆ 9.30 ರಿಂದ 10.30ರವರೆಗೆ ಮುಹೂರ್ತದಲ್ಲಿ ನೆರವೇರಿತು ನಂತರ ಆರತಕ್ಷತೆ ಮುಗಿಸಿ ಅತ್ತೆಯ ಮನೆಗೆ ಪ್ರವೇಶಿಸ ಬೇಕಿದ್ದ ಮಧುಮಗಳು ಕಲ್ಯಾಣ ಮಂಟಪದಿಂದ ಮಧುಮಗನೊಂದಿಗೆ ಕಾಲೇಜಿಗೆ ಆಗಮಿಸಿದಳು.

ಮಧುಮಗಳ ಅಲಂಕಾರದಲ್ಲೇ ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಪರೀಕ್ಷೆ ಬರೆದು ಇತರ ಎಲ್ಲ ಹೆಣ್ಣು ಮಕ್ಕಳಿಗೂ ಪ್ರೇರಣೆಯಾಗಿದ್ದಾಳೆ.

ಇದನ್ನು ಓದಿ : weather report 12 – 05 – 2022

ಶಾಸಕ ಪುಟ್ಟರಾಜು ಸಹಕಾರ ಸ್ಮರಣೀಯ ;

ಮದುವೆ ದಿನವೇ ಪರೀಕ್ಷೆ ಬರೆದ ವಿದ್ಯಾರ್ಥಿನಿ ಐಶ್ವರ್ಯ ಹಾಗೂ ಈಕೆಗೆ ಸಹಕಾರ ನೀಡಿದ ಪಾಲಕರಿಗೆ ಶಾಸಕ ಸಿ.ಎಸ್​.ಪುಟ್ಟರಾಜು ಹಾಗೂ ಎಸ್​ಟಿಜಿ ಶಿಕ್ಷಣ ಸಂಸ್ಥೆಯ ಸಿಇಒ ಸಿ.ಪಿ.ಶಿವರಾಜು ಅಭಿನಂದನೆ ಸಲ್ಲಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!