ನ್ಯೂಸ್ ಸ್ನ್ಯಾಪ್
ನವದೆಹಲಿ
ರಾಷ್ಟ್ರರಾಜಧಾನಿ ದೆಹಲಿಯಲ್ಲಿ ದೂರದರ್ಶನದ ಪತ್ರಕರ್ತೆಯೊಬ್ಬರ ಮೊಬೈಲ್ ಕಳ್ಳರು ಕದಿಯಲು ಹೋದಾಗ ಸ್ವತಃ ಪತ್ರಕರ್ತೆಯೇ ಆ ಕಳ್ಳರನ್ನು ಹಿಡಿದು ಪೋಲೀಸರ ವಶಕ್ಕೆ ಒಪ್ಪಿಸಿದ ಘಟನೆ ವರದಿಯಾಗಿದೆ.
ದಕ್ಷಿಣ ದಿಲ್ಲಿಯ ಮಾಲ್ವಿಯಾ ನಗರದಿಂದ ಆಟೋದಲ್ಲಿ ಪತ್ರಕರ್ತೆ ಬರುತ್ತಿದ್ದ ವೇಳೆ ಕಳ್ಳರು ಆಕೆಯ ಮೊಬೈಲನ್ನು ಕದಿಯಲು ಪ್ರಯತ್ನಿಸಿದ್ದಾರೆ. ಕೂಡಲೇ ಜಾಗೃತಳಾದ ಪತ್ರಕರ್ತೆ ಕಳ್ಳರನ್ನು ಬೆನ್ನಟ್ಟಿದ್ದಿದ್ದಾರೆ. ಗೊಂದಲಕ್ಕೊಳಗಾದ ಕಳ್ಳರು ತಮ್ಮ ಬೈಕನ್ನು ಯದ್ವಾತದ್ವಾ ಓಡಿಸುವಾಗ ಪೋಲೀಸರ ಬ್ಯಾರಿಕೇಡ್ ತಗುಲಿ ಕೆಳಕ್ಕುರುಳಿದ್ದಾರೆ. ಅವರನ್ನು ಪತ್ರಕರ್ತೆಯು ಹಿಡಿದು ಪೋಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಕಳ್ಳರಿಬ್ಬರೂ ದೆಹಲಿಯ ತುಘಲಕಾಬಾದ್ ನ ನಿವಾಸಿಗಳೆಂದು ಖಚಿತ ಪಡಿಸಿರುವ ಪೋಲೀಸರು ಪತ್ರಕರ್ತೆಯನ್ನು ಅಭಿನಂದಿಸಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು