December 24, 2024

Newsnap Kannada

The World at your finger tips!

arrest

ಸಚಿವ ಸಹೋದರನ ಮೊಬೈಲ್ ಕದ್ದ ಗ್ಯಾಂಗ್ ಬಂಧನ‌

Spread the love

ಬೆಂಗಳೂರಿನಲ್ಲಿ ಮೊಬೈಲ್​, ಬೈಕ್​ ಕದ್ದು ಹೈಟೆಕ್​ ಆಗಿ ಮಾರಾಟ ಮಾಡುತ್ತಿದ್ದ ಕಿಲಾಡಿ ಕಳ್ಳರ ತಂಡವನ್ನು ಪೊಲೀಸರ ಬಂಧಿಸಿದ್ದಾರೆ.

ನಗರದಲ್ಲಿನ ಬೈಕ್ ಕೂಡಾ ಕಳ್ಳತನ ಮಾಡುತ್ತಿದ್ದ ಖದೀಮರು ಬೈಕ್ ಕದ್ದು ಅದರಲ್ಲಿನ ಜಿಪಿಎಸ್ ತೆಗೆದು ಮಾರುತ್ತಿದ್ದರಂತೆ. ನಾಲ್ಕೈದು ತಿಂಗಳಿನಿಂದ 17 ಕ್ಕೂ ಹೆಚ್ಚು ಪ್ರಕರಣಗಳು ಅನ್ನಪೂರ್ಣೇಶ್ವರಿನಗರ ಪೊಲೀಸ್​ ಠಾಣೆಯಲ್ಲಿ ದಾಖಲಾಗಿವೆ.

ವಿಐಪಿ ಜನರ ಮೊಬೈಲ್​ಗಳನ್ನೇ ಟಾರ್ಗೆಟ್​ ಮಾಡ್ತಿದ್ದ ಈ ಚಾಲಾಕಿ ಕಳ್ಳರ ಗ್ಯಾಂಗ್​, ಸ್ವತಃ ಸಚಿವ ಅಶ್ವಥ್​ ನಾರಾಯಣ ಸಹೋದರನ ಮೊಬೈಲ್​ನ್ನೇ ಕನ್ನ ಹಾಕಿದ್ದರಂತೆ. ಹೀಗೆ ವಿಐಪಿಗಳ ಮೊಬೈಲ್​ಗಳಿಗೆ ಕನ್ನ ಹಾಕ್ತಿದ್ದ ಖದೀಮರು, ಕದ್ದ ಮೊಬೈಲ್​ಗಳಿಗೆ ಅಮೇಜಾನ್​ನಲ್ಲಿ ​ ಕೊಂಡಿರುವುದಾಗಿ ಫೇಕ್​ ಬಿಲ್​ ರೆಡಿ ಮಾಡಿ ಅದನ್ನು OLX ನಲ್ಲಿ ಮಾರಾಟಕ್ಕಿಡುತ್ತಿದ್ದರಂತೆ.

ವಿಐಪಿ ಮೊಬೈಲ್​ಗಳೇ ಕಳ್ಳತನವಾದ್ದರಿಂದ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು ಕೇವಲ ನಾಲ್ಕೆ ದಿನದಲ್ಲಿ ದೀಪಕ, ಆಕಾಶ್​, ವಿಜಯ್​​, ಮತ್ತು ಮದನ್​ಕುಮಾರ್​ ಎಂಬ ಖದೀಮರನ್ನು ಬಂಧಿಸಿದ್ದಾರೆ.

ಬಂಧಿತರಿಂದ ಮೊಬೈಲ್​ಗಳು ಸೇರಿದಂತೆ 4 ಬೈಕ್​ಗಳನ್ನು ವಶಪಡಿಸಿಕೊಂಡಿದ್ದಾರೆ.

ಸಿಲಿಕಾನ್​ ಸಿಟಿಯಲ್ಲಿ ದರೋಡೆ ಮಾಡಿದ ಮಾಲನ್ನ, ಹೈಟೆಕ್​ ಆಗಿ ಮಾರೋ ದಂಧೆ ಬೆಳಕಿಗೆ ಬಂದಿದೆ

Copyright © All rights reserved Newsnap | Newsever by AF themes.
error: Content is protected !!