ಮೊಬೈಲ್ ಫೋನ್ ಕೊಡಿಸುವಂತೆ ಮುನಿಸಿಕೊಂಡು ಮನೆ ಬಿಟ್ಟು ಹೋಗಿದ್ದ ಯುವಕ ಶವವಾಗಿ ಪತ್ತೆಯಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಪಟ್ಟಣದ ಓಬಳದೇವರ ಗುಟ್ಟ ಬಡಾವಣೆ ನಡೆದಿದೆ.
ಗೋಪಿ ಕೃಷ್ಣ ಮೃತ ಯುವಕನಾಗಿದ್ದಾನೆ.ಇದನ್ನು ಓದಿ –ಪ್ರವೀಣ್ ನೆಟ್ಟಾರು ಹತ್ಯೆ -ಮತ್ತಿಬ್ಬರು ಸೇರಿ 6 ಮಂದಿ ಬಂಧನ
ಓಬಳದೇವರ ಗುಟ್ಟ ಬಡಾವಣೆಯಲ್ಲಿ ತಾಯಿ ಶ್ಯಾಮಲಾ ಹಾಗೂ ಕುಟುಂಬದೊಂದಿಗೆ ಗೋಪಿ ಕೃಷ್ಣ ವಾಸಿಸುತ್ತಿದ್ದ. ಶ್ಯಾಮಲಾ ಅವರ ಪತಿ ಇಲ್ಲದೇ, ಇದ್ದೊಬ್ಬ ಮಗನೊಂದಿಗೆ ಕಷ್ಟಪಟ್ಟು ಮನೆ ನಡೆಸಿಕೊಂಡು ಹೋಗುತ್ತಿದ್ದರು.
ಎಸ್.ಎಸ್.ಎಲ್.ಸಿ ಮುಗಿಸಿದ್ದ ಆತ ಗಾರೆ ಕೆಲಸ ಮಾಡಿಕೊಂಡು ಜೀವನ ಮಾಡ್ತಿದ್ದ. ಆದರೆ ಕಳೆದ ತಿಂಗಳ ಗೋಪಿಕೃಷ್ಣ ಮನೆಯಿಂದ ಹೊರ ಹೋದವನು ವಾಪಸ್ ಮನೆಗೆ ಬಂದಿರಲಿಲ್ಲ.
ನಿನ್ನೆ ಗುಡಿಬಂಡೆ ಪಟ್ಟಣದ ಪ್ರವಾಸಿ ಮಂದಿರದ ಹಿಂಭಾಗ ನಿರ್ಜನ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಯುವಕ ಶವವಾಗಿ ಪತ್ತೆಯಾಗಿದೆ, ಮನೆಯಲ್ಲಿ ದುಃಖದ ಕಟ್ಟೆ ಹೊಡೆದಿದೆ.
ಇನ್ನೂ ಹೊಸ ಸ್ಮಾರ್ಟ ಪೋನ್ಗಾಗಿ ತಾಯಿ ಜೊತೆ ಮುನಿಸಿಕೊಂಡಿದ್ದ ಗೋಪಿಕೃಷ್ಣ, ಮನೆ ಬಿಟ್ಟು ಹೊರಟು ಹೋಗಿದ್ದ ಎನ್ನಲಾಗ್ತಿದೆ. ಇತ್ತ ತನ್ನ ಮಗನನ್ನು ಯಾರೊ ಕಿಡ್ನಾಪ್ ಮಾಡಿದ್ದಾರೆ ಅಂತ ಮೃತನ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು.
ದೂರು ನೀಡಿ ಎರಡೇ ದಿನದಲ್ಲಿ ಗೋಪಿಕೃಷ್ಣ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
- ದೇವತೆಗಳ ಆರಾಧನೆಗೆ ಮೀಸಲಾದ ದೇವಮಾಸ ಮಾರ್ಗಶಿರಮಾಸ
- ಬೊಲೆರೋ ಡಿಕ್ಕಿಯಿಂದ ಐವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ
- ಗೃಹಲಕ್ಷ್ಮಿ ಯೋಜನೆ ಸ್ಥಗಿತ ಮಾಡುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ
- 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇತಿಹಾಸ ಸೃಷ್ಟಿಸಲಿದೆ: ಸಚಿವ ಚಲುವರಾಯಸ್ವಾಮಿ
- ಸಿಎಂ ಪತ್ನಿಯ ನಿವೇಶನ ಹಗರಣ: ದೂರು ಹಿಂಪಡೆಯಲು ಆಮಿಷ ನೀಡಿದ ಆರೋಪ
- ಅಂತಾರಾಷ್ಟ್ರೀಯ ಕ್ರಿಕೆಟ್ಗೆ ರವಿಚಂದ್ರನ್ ಅಶ್ವಿನ್ ದಿಢೀರ್ ವಿದಾಯ
More Stories
ದೇವತೆಗಳ ಆರಾಧನೆಗೆ ಮೀಸಲಾದ ದೇವಮಾಸ ಮಾರ್ಗಶಿರಮಾಸ
ಬೊಲೆರೋ ಡಿಕ್ಕಿಯಿಂದ ಐವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ
ಗೃಹಲಕ್ಷ್ಮಿ ಯೋಜನೆ ಸ್ಥಗಿತ ಮಾಡುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ