February 21, 2026

Newsnap Kannada

The World at your finger tips!

vishwanath yalahank

ಶಾಸಕ ವಿಶ್ವನಾಥ್ ಟಿಟಿಡಿ ಸದಸ್ಯರಾಗಿ ನೇಮಕ

Spread the love

ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್ (ಟಿಟಿಡಿ)ಗೆ ಕರ್ನಾಟಕದ ಶಾಸಕ ಎಸ್.ಆರ್. ವಿಶ್ವನಾಥ್ ( ಬೆಂಗಳೂರು ಯಲಹಂಕ ಕ್ಷೇತ್ರ) ಅವರನ್ನು ಆಂಧ್ರಪ್ರದೇಶ ಸರ್ಕಾರ ನೇಮಿಸಿದೆ.


ಆ ರಾಜ್ಯದ ಮುಖ್ಯಮಂತ್ರಿ ವೈ.ಎಸ್. ಜಗನ್‌ಮೋಹನ್ ರೆಡ್ಡಿ ಈ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ವಿಶ್ವನಾಥ್ ಈ ಹಿಂದೆ ಬೆಂಗಳೂರಿನ ತಿರುಮಲ ತಿರುಪತಿ ಟ್ರಸ್ಟ್ನ ಸ್ಥಳೀಯ ಸಲಹಾ ಮಂಡಳಿಯ ಉಪಾಧ್ಯಕ್ಷರಾಗಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.


ಈ ಹುದ್ದೆಗೆ ತಮ್ಮನ್ನು ನೇಮಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಶಾಸಕರು, ತಿರುಮಲ ಕ್ಷೇತ್ರಕ್ಕೆ ಭೇಟಿ ನೀಡುವ ಕರ್ನಾಟಕದ ಭಕ್ತರಿಗೆ ಸೇವೆ ಸಲ್ಲಿಸುವ ಅದೃಷ್ಟ ತಮಗೆ ದೊರೆತಿದೆ ಎಂದು ಹೇಳಿದ್ದಾರೆ.


ಆಂಧ್ರದ ಸಿಎಂ, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತಿತರ ಮುಖಂಡರಿಗೆ ವಿಶ್ವನಾಥ್ ಧನ್ಯವಾದ ಅರ್ಪಿಸಿದ್ದಾರೆ.

error: Content is protected !!