January 3, 2025

Newsnap Kannada

The World at your finger tips!

WhatsApp Image 2023 03 03 at 8.40.33 AM

ಶಾಸಕ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮನೆಯೇ ಖಜಾನೆ: ಕಂತೆ ಕಂತೆ ನೋಟುಗಳು – 6 ಕೋಟಿ ಸೀಜ್

Spread the love

40 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪನ ಪುತ್ರ ಪ್ರಶಾಂತ್ ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾರೆ. ಜೊತೆಗೆ ನಿನ್ನೆ ರಾತ್ರಿಯಿಂದ 9 ಗಂಟೆ 30 ನಿಮಿಷಗಳ ಕಾಲ ಪ್ರಶಾಂತ್​ಗೆ ಸಂಬಂಧಿಸಿದ ಕಡೆಗಳಲ್ಲಿ ನಗದು ಹಾಗೂ ದಾಖಲೆಗಳಿಗಾಗಿ ತಲಾಶ್ ನಡೆದಿದ್ದು, ಅಕ್ರಮಗಳ ಸಾಕ್ಷಿಗಾಗಿ ಲೋಕಾಯುಕ್ತ ಪೊಲೀಸರು ಹುಡುಕಾಟ ನಡೆಸಿದ್ದಾರೆ.

40 ಲಕ್ಷಕ್ಕೆ ಡಿಮ್ಯಾಂಡ್..

ಲೋಕಾ ದಾಳಿ ವೇಳೆ ಪತ್ತೆಯಾಗಿರುವುದು 1 ಕೋಟಿ 62 ಲಕ್ಷ..! 80 ಲಕ್ಷ ಹಣಕ್ಕೆ ಬೇಡಿಕೆಯಿಟ್ಟಿದ್ದ ಪ್ರಶಾಂತ್ 40 ಲಕ್ಷ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.

ಕರ್ನಾಟಕ ರಾಜ್ಯ ಸಾಬುನು ಹಾಗೂ ಮಾರ್ಜಕ ನಿಗಮಕ್ಕೆ ಕಚ್ಚಾ ವಸ್ತುಗಳ ಪೂರೈಕೆ ಸಂಬಂಧ ಟೆಂಡರ್ ವಿಚಾರವಾಗಿ 80 ಲಕ್ಷಕ್ಕೆ ಪ್ರಶಾಂತ್ ಬೇಡಿಕೆ ಇಟ್ಟಿದ್ದರು ಎಂದು ದೂರುದಾರ ಶ್ರೇಯಸ್ ಕಶ್ಯಪ್ ದೂರು ನೀಡಿದ್ದರು.

ಈ ವೇಳೆ ಲೋಕಾಯುಕ್ತ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ದೂರುದಾರರಿಂದ 40 ಲಕ್ಷ ರೂಪಾಯಿ ಹಣ ಪಡೆಯುವಾಗಲೇ ರೆಡ್ ಹ್ಯಾಂಡಾಗಿ ಹಿಡಿದಿದ್ದರು.

ಕಳೆದ ರಾತ್ರಿಯಿಂದ ತೀವ್ರ ಶೋಧ ಮಾಡಿದ ಬಳಿಕ ಬರೋಬ್ಬರಿ 7 ಕೋಟಿಗೂ ಹೆಚ್ಚು ಹಣ ಸಿಕ್ಕಿದೆ.

7 ಕೋಟಿ 62 ಲಕ್ಷ ರು ಸೀಜ್..!

ಈಗ ಸಿಕ್ಕಿರುವ ಮಾಹಿತಿ ಪ್ರಕಾರ ಬರೋಬ್ಬರಿ ಶಾಸಕರ ಪುತ್ರನ ಸಂಜಯ ನಗರದ ಮನೆಯಲ್ಲಿ ಮತ್ತೆ 6 ಕೋಟಿ ಹಣ ಪತ್ತೆಯಾಗಿದೆಯಂತೆ. ಇದುವರೆಗೂ ಒಟ್ಟು 7 ಕೋಟಿ 62 ಲಕ್ಷ ಹಣ ರೂಪಾಯಿ ಹಣ ಪತ್ತೆಯಾಗಿದೆ.

ಜೊತೆಗೆ ಅಪಾರ ಪ್ರಮಾಣದ ದಾಖಲೆಗಳನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸಿಕ್ಕಿರುವ ಎಲ್ಲಾ ದಾಖಲೆಗಗಳನ್ನು ಪೇನ್ ಡ್ರೈವ್​ನಲ್ಲಿ ತೆಗೆದುಕೊಂಡಿದ್ದಾರೆ.

ನಿನ್ನೆಯೇ 1 ಕೋಟಿ ಹಣ ಪತ್ತೆ:

ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಇನ್ನೂ ಮೂರು ಕಂಪನಿಗಳು ಈ ಟೆಂಡರ್ ಪಡೆಯಲು 40 ಲಕ್ಷ ಹಣ ತೆಗೆದುಕೊಂಡು ಬಂದಿರೋದು ಪತ್ತೆಯಾಗಿತ್ತು. ಕಾಂಗ್ರೆಸ್ ಗೆ ಪಲಾಯನ ಮಾಡಲು ಸಚಿವ ನಾರಾಯಣಗೌಡ ಸಿದ್ದತೆ

ಹಣವನ್ನು‌ ಖಾಸಗಿ ಕಚೇರಿಗೆ ತಂದು ಕೊಡುವಂತೆ ಸೂಚನೆ‌ ನೀಡಲಾಗಿತ್ತು. ಹಾಗಾಗಿ ಎಲ್ಲರೂ ಹಣ ನೀಡಲು ಅಂತಾ ಖಾಸಗಿ ಕಚೇರಿಯಾದ ಎಂ ಸ್ಟುಡಿಯೋಗೆ ಲಕ್ಷ ಲಕ್ಷ ಹಣ ತಂದಿದ್ದರು. ಹೀಗೆ ತಂದಿರುವ ಒಟ್ಟು 1 ಕೋಟಿ 62 ಲಕ್ಷ ರೂಪಾಯಿ ಹಣವನ್ನ ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ತಂದೆ ವಿರೂಪಾಕ್ಷಪ್ಪ ಅವರ ಪರವಾಗಿ ಮಗ ಮಾಡಾಳ್ ಪ್ರಶಾಂತ್ ಹಣ ಪಡೆಯಲು ಬಂದಿರುವುದು ಈ ವೇಳೆ ಬಯಲಾಗಿದೆ.

Copyright © All rights reserved Newsnap | Newsever by AF themes.
error: Content is protected !!