ನ್ಯೂಸ್ ಸ್ನ್ಯಾಪ್
ಮೈಸೂರು
ಕೊರೋನಾ ಕಾರಣದಿಂದ ಮಾತ್ರವಲ್ಲ ಹುಟ್ಟು ಹಬ್ಬಗಳ ಆಚರಣೆಗಳು ಸರಳವಾಗಿರಬೇಕು ಮತ್ತು ಅರ್ಥ ಪೂರ್ಣವಾಗಿ ಇರಬೇಕು ಎಂದು ಬನ್ನೂರಿನ ಜನ ಜಾಗೃತಿ ವೇದಿಕೆ ಹಾಗೂರಕ್ತ ದಾನ ಮಾಹಾ ದಾನ ಸಂಘಟನೆಯವರು ಜಂಟಿಯಾಗಿ ಇಬ್ಬರು ಗಣ್ಯರ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿದರು.
ಶಾಸಕ ನಾಗೇಂದ್ರ ಹಾಗೂ ಸಮಾಜ ಸೇವಕ ಕಾನ್ ಸಿಂಗ್ ಜೀ ರಾಜಪುರೋಹಿತ್ ಅವರ ಜನ್ಮ ದಿನದ ಅಂಗವಾಗಿ ಮೈಸೂರಿನ ಛಾಯಾದೇವಿ ಆಶ್ರಮದ ಮಕ್ಕಳಿಗೆ ಪುಸ್ತಕ, ಪೆನ್ನುವಿತರಣೆ ಮಾಡಲಾಯಿತು. ಇದೇ ವೇಳೆ ಆಶ್ರಮದಲ್ಲಿರುವ ವೃದ್ಧರಿಗೂ ಕೂಡ ಬಟ್ಟೆ ಹಾಗೂ ಅಗತ್ಯ ವಸ್ತುಗಳನ್ನು ನೀಡಲಾಯಿತು.
ಸೇವಾ ಕಾರ್ಯ ಮಾಡಬೇಕು ಎನ್ನುವ ಉದ್ದೇಶದ ಹಿನ್ನಲೆಯಲ್ಲಿ ತಾವು ಶಾಸಕ ನಾಗೇಂದ್ರ ಹಾಗೂ ತಮ್ಮ ತಂದೆ ಕಾನ್ ಸಿಂಗ್ ಜೀ ರಾಜಪುರೋಹಿತ್ ಅವರ ಹುಟ್ಟು ಹಬ್ಬವನ್ನು ಈ ಆಶ್ರಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬನ್ನೂರಿನ ಜನ ಜಾಗೃತಿ ವೇದಿಕೆಯ ಅಧ್ಯಕ್ಷ ಕೆ ಮಹೇಂದ್ರ ಸಿಂಗ್ ಕಾಳಪ್ಪ ತಿಳಿಸಿದರು.
ವೇದಿಕೆಯ ಪದಾಧಿಕಾರಿಗಳು ಹಾಗೂ ಟ್ಪಸ್ಟ್ ನ ಸದಸ್ಯರಾದ ಪೃಥ್ವಿ ಸಿಂಗ್ ದಲಪತ್ ಸಿರ್ವಿ ಪ್ರಕಾಶ್ ರಾಥೋಡ್ ಅಮರರಾಮ್ , ಗುದಡ್ ರಾಮ್ ಸಿರ್ವಿ ಮೊದಲಾದವರು ಸೇವಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು
More Stories
ಮೈಸೂರಿನ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು: ಪ್ರತಾಪ್ ಸಿಂಹ-ಯದುವೀರ್ ನಡುವೆ ವಾಕ್ಸಮರ
ಸಿದ್ದರಾಮಯ್ಯ ಹೆಸರನ್ನು ರಸ್ತೆಗೆ ಇಟ್ಟರೆ ತಪ್ಪೇನು? – ಸಿಎಂ ಪರ ನಿಂತುಕೊಂಡ ಪ್ರತಾಪ್ ಸಿಂಹ
ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು: ಪಾಲಿಕೆ ತೀರ್ಮಾನಕ್ಕೆ ಆಕ್ಷೇಪಣೆಗಳು