- ಕ್ಯಾಮೆರಾ ಫಿಕ್ಸ್ ಮಾಡಿ ಮಾಜಿ ಸಿಎಂ ಸ್ಟಿಂಗ್ ಮಾಡಿದ್ದಾರೆ
- ಮುನಿರತ್ನ ಅವರಿಂದ ನನಗೆ ಪದೇ ಪದೇ ನನಗೆ ವಿಡಿಯೋ ಕಾಲ್
- ಮಾಜಿ ಸಿಎಂಗೂ ಕೊಡಬಾರದ ಹಿಂಸೆ ಕೊಟ್ಟಿದ್ದಾರೆ ಎಂದ ಸಂತ್ರಸ್ತೆ
ಬೆಂಗಳೂರು:ಅತ್ಯಾಚಾರ, ಕೊಲೆ ಬೆದರಿಕೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ.
ಈ ಪ್ರಕರಣದಲ್ಲಿ ದೂರು ನೀಡಿರುವ ಸಂತ್ರಸ್ತೆ ಸುದ್ದಿಗೋಷ್ಟಿಯಲ್ಲಿ ಹಲವು ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ಹನಿಟ್ರ್ಯಾಪ್ ಜಾಲದ ಜೊತೆಗೆ ಮಾಜಿ ಸಿಎಂ ಅವರು ಸ್ಟಿಂಗ್ ಆಗಿರೋದು ನಿಜ ಎಂದು ಒಪ್ಪಿಕೊಂಡಿದ್ದಾರೆ.
ಸ್ಫೋಟಕ ಮಾಹಿತಿಯನ್ನು ಎಳೆ, ಎಳೆಯಾಗಿ ಬಿಚ್ಚಿಟ್ಟ ಸಂತ್ರಸ್ತೆ ಹಾಗೂ ಸಂತ್ರಸ್ತೆ ಪರ ವಕೀಲರು ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ.
2020ರಲ್ಲಿ ಶಾಸಕ ಮುನಿರತ್ನ ಅವರ ಪರಿಚಯ ನನಗೆ ಆಗುತ್ತೆ. ಕೋವಿಡ್ ಸಂದರ್ಭದಲ್ಲಿ ಸ್ಥಳೀಯ ಕಾರ್ಪೋರೇಟರ್‌ಗೆ 5 ಸಾವಿರ ಮಾಸ್ಕ್ ಅನ್ನು ಕೊಟ್ಟಿದ್ದೆ. ಆ ಸಂದರ್ಭದಲ್ಲಿ ಮುನಿರತ್ನ ಅವರು ನನಗೆ ಪರಿಚಯ ಆಗಿದ್ದರು. ಆಗ ಮುನಿರತ್ನ ಅವರು ನನಗೆ ನಿಮ್ಮಿಂದ ಒಂದು ಸಹಾಯ ಆಗಬೇಕು. ಟೈಮ್ ಬಂದಾಗ ಕೇಳ್ತೀನಿ ಅಂತ ಹೇಳಿ ಫೋನ್ ನಂಬರ್ ತೆಗೆದುಕೊಳ್ಳುತ್ತಾರೆ. ಆಗಲೇ ಮುನಿರತ್ನ ಹಾಗೂ ನನ್ನ ಫೋನ್ ನಂಬರ್ ಎಕ್ಸ್‌ಚೇಂಜ್ ಆಗುತ್ತೆ.
ಫೋನ್ ನಂಬರ್ ತೆಗೆದುಕೊಂಡ ಬಳಿಕ ಮುನಿರತ್ನ ಅವರು ಪದೇ ಪದೇ ನನಗೆ ವೀಡಿಯೋ ಕಾಲ್ ಮಾಡುತ್ತಾರೆ. ಗೋಡೌನ್‌ಗೆ ಬರೋಕೆ ಹೇಳ್ತಾರೆ. ಅಲ್ಲಿಗೆ ಹೋದ ಮೇಲೆ ನನ್ನ ತಬ್ಬಿಕೊಳ್ಳುತ್ತಾರೆ. ನೀವು ನನ್ನ ತಂದೆ ಸಮಾನ ಅಂಥ ಹೇಳಿದ್ರು ಅವರು ನನ್ನ ಬಿಡಲ್ಲ. ಅದಾದ ಬಳಿಕ ನನಗೆ ಬೆದರಿಕೆ ಹಾಕುತ್ತಾರೆ. ಈ ಹಿಂದೆ ಕಂಪ್ಲೇಂಟ್ ಮಾಡಿದಾಗ ಬೆದರಿಕೆ ಹಾಕಿದ್ದರು.
ಸ್ವಲ್ಪ ದಿನಗಳ ಬಳಿಕ ಮುನಿರತ್ನ ಅವರು ಮತ್ತೆ ನನ್ನ ಕರೀತಾರೆ. ಇನ್ನೊಬ್ಬರ ವಿಡಿಯೋ ಬೇಕು ಅಂತ ಹೇಳುತ್ತಾರೆ. ನಾನು ಆಗಲ್ಲ ಅಂದ್ರೆ ಅವರು ಕೇಳಲ್ಲ. ನೀನು ಮಾಡಿಲ್ಲ ಅಂದ್ರೆ ನಿನ್ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಾರೆ ಎಂದಿದ್ದರು. ಹೀಗೆ ಕ್ಯಾಮೆರಾ ಫಿಕ್ಸ್ ಮಾಡಿ ಮಾಜಿ ಸಿಎಂ ಅವರು ಸ್ಟಿಂಗ್ ಆಗಿರೋದು ನಿಜ ಎಂದು ಸಂತ್ರಸ್ತೆ ಹೇಳಿದ್ದಾರೆ.
ನಿನ್ನ ಮಕ್ಕಳ ಮೇಲೆ ಲಾರಿ ಹತ್ತಿಸುತ್ತೇನೆ. ನಿನ್ನ ಗಂಡನಿಗೆ ಹೇಳ್ತೀನಿ ಅಂಥ ಭಯಪಡಿಸಿದ್ದರು. ಹಾಗಾಗಿ ನಾನು ಟ್ರ್ಯಾಪ್ ಮಾಡೋಕೆ ಒಪ್ಪಿಕೊಂಡಿದ್ದೆ. ಮಾಜಿ ಸಿಎಂಗೂ ಕೊಡಬಾರದ ಹಿಂಸೆ ಕೊಟ್ಟಿದ್ದಾರೆ. ಬಹಳಷ್ಟು ಜನ ಮುಖಂಡರು, ಮಾಜಿ ಸಿಎಂಗಳ ವಿಡಿಯೋ ಇದೆ. ನಾನು ಮಾತ್ರ ಅಲ್ಲ ಬೇರೆಯವರನ್ನೂ ಬಳಸಿಕೊಂಡು ಸ್ಟಿಂಗ್ ಮಾಡಿದ್ದಾರೆ ಎಂದು ಸಂತ್ರಸ್ತೆ ಹೇಳಿಕೆ ನೀಡಿದ್ದಾರೆ.ಅತ್ಯಾಚಾರ ಆರೋಪ: ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ವಿರುದ್ಧ FIR ದಾಖಲು
ಸಂತ್ರಸ್ಥೆ ಪರ ವಕೀಲರು, ಇಬ್ಬರು ಮಾಜಿ ಸಿಎಂಗಳ ಹನಿಟ್ರ್ಯಾಪ್ ಆಗಿದೆ. ಅವರು ಮಿನಿಸ್ಟರ್ ಸ್ಥಾನಕ್ಕೋಸ್ಕರ ಹೀಗೆಲ್ಲಾ ಮಾಡಿದ್ದಾರೆ. ರಾಜಕೀಯ ವ್ಯಕ್ತಿಗಳು ಸೇರಿದಂತೆ ಹಲವರ ಹನಿಟ್ರ್ಯಾಪ್ ಆಗಿದೆ. ಕೆಲವೊಂದು ದಾಖಲೆಗಳ ಸಮೇತ ಕೋರ್ಟ್ ಮೊರೆ ಹೋಗ್ತೀವಿ ಎಂದಿದ್ದಾರೆ.
More Stories
ಬೊಲೆರೋ ಡಿಕ್ಕಿಯಿಂದ ಐವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ
ಗೃಹಲಕ್ಷ್ಮಿ ಯೋಜನೆ ಸ್ಥಗಿತ ಮಾಡುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇತಿಹಾಸ ಸೃಷ್ಟಿಸಲಿದೆ: ಸಚಿವ ಚಲುವರಾಯಸ್ವಾಮಿ