December 19, 2024

Newsnap Kannada

The World at your finger tips!

WhatsApp Image 2022 06 09 at 1.14.39 PM

MLA Gauri Shankar Escape on trip

ಟ್ರಿಪ್ ನೆಪದಲ್ಲಿ ಶಾಸಕ ಗೌರಿಶಂಕರ್ ಎಸ್ಕೇಪ್ – ಜೆಡಿಎಸ್​ಗೆ ತಲೆನೋವಾದ ತುಮಕೂರು ಜಿಲ್ಲೆಯ ಶಾಸಕರಿಬ್ಬರ ನಡೆ

Spread the love

ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ಮಾಜಿ ಸಿಎಂ ಕುಮಾರಸ್ವಾಮಿ ಗುರುವಾರ ಬೆಳಗ್ಗೆ ಬೆಂಗಳೂರಿನ ವೈಟ್​ಫೀಲ್ಡ್​ನ ವಿವಂತಾ ಹೋಟೆಲ್​ನಲ್ಲಿ ಶಾಸಕರ ಜೊತೆ ಒಂದು ಸುತ್ತಿನ ಸಭೆ ನಡೆಸಿದ್ದಾರೆ.

ಇದನ್ನು ಓದಿ –ವ್ಯಕ್ತಿಯ ಮೇಲೆ ಚಿತ್ರನಟ ಜೈಜಗದೀಶ್ ಹಲ್ಲೆ? ಪೊಲೀಸರಿಗೆ ದೂರು

ಮತ್ತೊಂದು ಸುತ್ತಿನ ಸಭೆ ಯಶವಂತಪುರದ ತಾಜ್ ವಿವಂತಾ ಹೋಟೆಲ್​ಗೆ ಶಿಫ್ಟ್​ ಆಗಿದೆ. ಎಲ್ಲರೂ ಕಡ್ಡಾಯವಾಗಿ ಬರಬೇಕು ಎಂಬ ಸೂಚನೆ ಇದೆ. ಆದರೆ ಟ್ರಿಪ್ ನೆಪದಲ್ಲಿ ತುಮಕೂರು ಗ್ರಾಮಾಂತರ ಶಾಸಕ ಶಾಸಕ ಗೌರಿಶಂಕರ್ ನಾಪತ್ತೆಯಾಗಿದ್ದಾರೆ.

ಕುಟುಂಬದ‌ ಜೊತೆ ಫಾರಿನ್ ಟ್ರಿಪ್​ನಲ್ಲಿ ಇದ್ದೀನಿ. ಫಾರಿನ್​ನಿಂದ ಇಂದು ಸಂಜೆ ಬೆಂಗಳೂರಿಗೆ ಬರುವೆ. ನಾಳೆ ಮತ ಹಾಕ್ತೀನಿ ಎಂದು ಶಾಸಕ ಗೌರಿಶಂಕರ್ ಹೇಳಿರುವುದು ಜೆಡಿಎಸ್​ನಲ್ಲಿ ಆತಂಕ ಹೆಚ್ಚಿಸಿದೆ.

ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿಸಲು ಕಾಂಗ್ರೆಸ್ ಸಂಚು ರೂಪಿಸಿದೆ, ಗೌರಿಶಂಕರ್‌ ಅವರು ಕಾಂಗ್ರೆಸ್ ನಾಯಕರ ಆಮಿಷಕ್ಕೆ ಒಳಗಾಗಿ ಉಲ್ಟಾ ಹೊಡೀತಾರಾ? ಎಂಬ ಆತಂಕ ಜೆಡಿಎಸ್​ಗೆ ಕಾಡುತ್ತಿದೆ.

ಇಂದು ಸಂಜೆ ಬೆಂಗಳೂರಿನಲ್ಲಿ ನಡೆಯಲಿರುವ ಜೆಡಿಎಸ್ ಸಭೆಗೆ ಗೌರಿಶಂಕರ್ ಹಾಜರಾಗುವುದು ಅನುಮಾನ

ಗುಬ್ಬಿ ಶಾಸಕ ಶ್ರೀನಿವಾಸ್​ ಕೂಡ ಜೆಡಿಎಸ್​ಗೆ ಕೈಕೊಡುವ ಸಾಧ್ಯತೆ ಇದೆ. ಒಟ್ಟಾರೆ ಜೆಡಿಎಸ್​ ಭದ್ರಕೋಟೆಯಂತಿದ್ದ ತುಮಕೂರು ಜಿಲ್ಲೆಯ ಶಾಸಕರಿಬ್ಬರ ನಡೆ ಜೆಡಿಎಸ್​ ಪಾಲಿಗೆ ಮುಳ್ಳಾಗಿರುವುದಂತೂ ನಿಜ.

Copyright © All rights reserved Newsnap | Newsever by AF themes.
error: Content is protected !!