January 5, 2025

Newsnap Kannada

The World at your finger tips!

pallavi

ತನ್ನೊಂದಿಗೆ ಮಾತನಾಡದ, ಸಮಯ ಕೊಡದ ಪತಿಯ ಮೇಲೆ ಮುನಿಸು :ಪತ್ನಿ ಆತ್ಮಹತ್ಯೆ

Spread the love

ಗಂಡ ತನ್ನೊಂದಿಗೆ ಹೆಚ್ಚು ಸಮಯ ಕಳೆಯುವುದಿಲ್ಲ ಹಾಗೂ ಮಾತನಾಡುವುದಿಲ್ಲ ಎಂಬ ವಿಷಯಕ್ಕೆ ಮುನಿಸಿಕೊಂಡ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಇಂದಿರಾ ನಗರದಲ್ಲಿ ನಡೆದ ಈ ಘಟನೆಯಲ್ಲಿ ಶಿರಸಿ ತಾಲೂಕಿನ ಗಿಡಮಾವಿನಕಟ್ಟೆಯ ನಿವಾಸಿಯಾಗಿದ್ದ ಪಲ್ಲವಿ ವಿಜಯ ದೇವಡಿಗ (27) ಆತ್ಮಹತ್ಯೆಗೆ ಶರಣಾದ ಗೃಹಿಣಿ.

2 ವರ್ಷಗಳಿಂದ ಪತಿಯೊಂದಿಗೆ ಇಂದಿರಾ ನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು.ಪತಿ ತನ್ನ ಜೊತೆ ಹೆಚ್ಚಿನ ಸಮಯ ಕಳೆಯುವುದಿಲ್ಲ ಎಂದು ಕೊರಗುತ್ತಿದ್ದರು.

ಪತಿ ಗೆಳೆಯರೊಂದಿಗೆ ಕ್ರಿಕೆಟ್ ನೋಡಲು ತೆರಳಿದ್ದರಿಂದ ಪಲ್ಲವಿ ಸಿಟ್ಟಾಗಿದ್ದರು. ಮಗನಿಗಾಗಿ ಕಟ್ಟಲಾಗಿದ್ದ ಜೋಕಾಲಿಯ ಸೀರೆ ಸೆರಗನ್ನು ಬಿಚ್ಚಿ ಅದರ ಮೂಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!