November 16, 2024

Newsnap Kannada

The World at your finger tips!

politics,election,congress

Narayan gowda congress opposition report to high command ನಾರಾಯಣಗೌಡ ಕಾಂಗ್ರೆಸ್‌ ಸೇರ್ಪಡೆ ವಿರೋಧ : ಹೈ ಕಮಾಂಡ್‌ಗೆ ವರದಿ - ಕೆ. ಬಿ. ಸಿ

ಆದಾಯ ತೆರಿಗೆ ಇಲಾಖೆಗೆ ತಪ್ಪು ಮಾಹಿತಿ ಆರೋಪ: ಸಚಿವ ನಾರಾಯಣ ಗೌಡಗೆ ಸಂಕಷ್ಟ

Spread the love

ಕಳೆದ ಎರಡು ಚುನಾವಣೆಯಲ್ಲಿ ಸುಳ್ಳು ಅಫಿಡವಿಟ್ ನೀಡಿದ ಆರೋಪದಲ್ಲಿ ಸಚಿವ ನಾರಾಯಣಗೌಡಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

2013, 2018 ಮತ್ತು ಉಪ ಚುನಾವಣೆಯ ಅಫಿಡವಿಟ್‍ನಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ. ಆದಾಯಕ್ಕಿಂತ ಕಡಿಮೆ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆಂಬುದು ಆರೋಪ.

ಪತ್ನಿ ಹೆಸರಲ್ಲಿ ಶೇ.5000ರಷ್ಟು ಆಸ್ತಿ ಹೆಚ್ಚಳವಾಗಿದೆ. ಆದರೂ ಆದಾಯದ ಮೂಲ ಯಾವುದು ಅಂತ ತೋರಿಸಿಲ್ಲ. ಲೋಕಾಯುಕ್ತಕ್ಕೆ ಸರಿಯಾದ ಅಫಿಡವಿಟ್ ಸಲ್ಲಿಸಿದ್ದಾರೆ. ಆದರೆ ಐಟಿ ಇಲಾಖೆಗೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ರಾಜ್ಯಪಾಲರಿಗೆ ದೂರು ನೀಡಿದ್ದರು.

ಈ ದೂರು ಪರಿಶೀಲನೆ ನಡೆಸಿದ ರಾಜ್ಯಪಾಲರು ಮುಂದಿನ ಕ್ರಮಕ್ಕಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಯವರಿಗೆ ಆದೇಶಿಸಿದ್ದಾರೆ.

ವಿಚಾರಣೆಗೆ ಆದೇಶಿಸಿಲ್ಲ – ನಾ. ಗೌ :

ಈ ದೂರಿನ ವಿಚಾರಣೆಗೆ ಪ್ರಾಸಿಕ್ಯೂಷನ್‍ಗೆ ಅನುಮತಿ ಕೊಟ್ಟಿಲ್ಲ. ಮುಖ್ಯ ಕಾರ್ಯದರ್ಶಿಗಳಿಗೆ ಮುಂದಿನ ಕ್ರಮಕ್ಕಾಗಿ ವರ್ಗಾಯಿಸಿದ್ದಾರೆ ಅಂತ ಸಚಿವ ನಾರಾಯಣಗೌಡ ಹೇಳಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!