ಮಂಡ್ಯ : ಮದ್ದೂರು ಪಟ್ಟಣದ ಕೊಪ್ಪ ಸರ್ಕಲ್ ಬಳಿ ಕುಡಿದ ಮತ್ತಲ್ಲಿ ಸರ್ಕಾರಿ ಬಸ್ ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಯುವಕರ ತಂಡ ಬಸ್ ಗೆ ಕಲ್ಲು ಹೊಡೆದ ಪರಿಣಾಮ ಬಸ್ಸಿನ ಗಾಜು ಪುಡಿ ಪುಡಿಯಾಗಿ ಮಹಿಳೆ ಗಾಯಗೊಂಡಿರುವ ಘಟನೆ ನಡೆದಿದೆ.
ಯಶವಂತ್, ದೀಪು ,ಮಹೇಶ್, ಮಧುಕುಮಾರ್, ಗಿರೀಶ್ ಎಂಬ 5 ಮಂದಿ ಯುವಕರ ತಂಡ ಕಂಠ ಪೂರ್ತಿ ಕುಡಿದು ಕೊಪ್ಪ ಸರ್ಕಲ್ ಬಳಿ ಬೆಂಗಳೂರಿಗೆ ತೆರಳುತ್ತಿದ್ದ (KA -42-F-2146) ಬಸ್ ಹತ್ತಲು ಮುಂದಾಗಿದ್ದಾರೆ.
ಬಸ್ ಹತ್ತಲು ಯುವಕರು ತಡ ಮಾಡಿದ ಪರಿಣಾಮ ನಿರ್ವಾಹಕ ಇವರನ್ನು ಬಿಟ್ಟು ತೆರಳಲು ಚಾಲಕನಿಗೆ ಸೂಚನೆ ನೀಡಿದ್ದು ,ಇದರಿಂದ ಆಕ್ರೋಶಗೊಂಡ ಯುವಕರ ಗುಂಪು ಬಸ್ ಮುಂದಕ್ಕೆ ಚಲಿಸುತ್ತಿದ್ದಂತೆ ಹಿಂಬದಿ ಗಾಜಿಗೆ ಕಲ್ಲಿನಿಂದ ತೂರಿದ್ದಾರೆ.
ಈ ವೇಳೆ ಕಲ್ಲು ಬಸ್ಸಿನ ಹಿಂಬದಿ ಗಾಜಿಗೆ ಒಡೆದ ಪರಿಣಾಮ ಗಾಜು ಪುಡಿ ಪುಡಿಯಾಗಿ ಬಸ್ ನಲ್ಲಿದ್ದ ಮಹಿಳೆಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಯುವಕರು ಮದ್ಯಪಾನ ಮಾಡಿದ್ದರು ಎಂದು ಪ್ರಯಾಣಿಕರು ಹಾಗೂ ಬಸ್ ನಿರ್ವಾಹಕ ಅನುಮಾನ ವ್ಯಕ್ತಪಡಿಸಿದ್ದು ,ಬಸ್ ನಿರ್ವಾಹಕ ಬಸ್ ಅನ್ನು ನಿಲ್ಲಿಸಿ ಸಾರ್ವಜನಿಕರ ಸಹಾಯದಿಂದ ಅಲ್ಲೆ ಇದ್ದ ಒಬ್ಬ ಯುವಕನನ್ನು ಹಿಡಿದುಕೊಳ್ಳುತ್ತಿದ್ದಂತೆ ಇನ್ನುಳಿದ ಯುವಕರು ಪರಾರಿಯಾಗಿದ್ದಾರೆ.ಮೈಸೂರು ಮುಡಾದಲ್ಲಿ ನಿವೇಶನಕ್ಕಾಗಿ 85 ಸಾವಿರ ಅರ್ಜಿ – ಶಾಸಕ ಶ್ರೀವತ್ಸ
ಪೋಲೀಸರಿಗೆ ಒಬ್ಬನನ್ನು ಒಪ್ಪಿಸಿ ನಂತರ ಬಸ್ ನಲ್ಲಿದ್ದ ಪ್ರಯಾಣಿಕರನ್ನು ಬೇರೆ ಬಸ್ಸಿನಲ್ಲಿ ತೆರಳಲು ಅವಕಾಶ ಮಾಡಿಕೊಟ್ಟು ನಂತರ ಪೋಲೀಸರು ಬಸ್ಸನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
More Stories
ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
ರಾಜ್ಯದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ: ಬಿಜೆಪಿಗೆ ಆಘಾತ