ಆನ್ ಲೈನ್ ತರಗತಿ ಪಾಠ ಕಳಿಸುವ ಮುನ್ನ ವಿದ್ಯಾರ್ಥಿ ಗಳಿಗೆ ಅಶ್ಲೀಲ ಚಿತ್ರ ಗಳನ್ನು ರವಾನೆ ಮಾಡುತ್ತಿದ್ದ ಆರೋಪದ ಮೇಲೆ ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ಬಿಡುಗಡೆ ಮಾಡಲಾಗಿದೆ.
ಮಂಡ ಜಿಲ್ಲೆಯ ಕೆ ಆರ್ ಸಾಗರ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಮಾಡುತ್ತಿದ್ದ ಮೂರ್ತಿ ಎಂಬುವವರೇ ಈ ಕೃತ್ಯ ಮಾಡುತ್ತಿದ್ದರೆಂದು ಹೇಳಲಾಗಿದೆ.
ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರಾಗಿ ಪಾಠ ಮಾಡುತ್ತಿದ್ದ ಮೂರ್ತಿ ಆನ್ ಲೈನ್ ಪಾಠದ ಜೊತೆಗೆ ಅಶ್ಲೀಲ ಚಿತ್ರ ಗಳನ್ನು ಅಪ್ ಲೋಡ್ ಮಾಡುತ್ತಿದ್ದರು. ಇದು ಕಾಲೇಜಿನ ವಾಟ್ ಸ್ಯಾಪ್ ಗ್ರೂಪ್ ನಲ್ಲಿರುವ ಇತರ ಉಪನ್ಯಾಸಕರಿಗೆ ಗೊತ್ತಾಗಿದೆ. ಪ್ರಾಂಶುಪಾಲರ ಗಮನಕ್ಕೆ ತಂದಿದ್ದಾರೆ.
ಈ ವಿಷಯವನ್ನು ಪ್ರಾಂಶುಪಾಲರು ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರ ಗಮನಕ್ಕೆ ತಂದು ಚಚೆ೯ ಮಾಡಿದ ನಂತರ ಅತಿಥಿ ಉಪನ್ಯಾಸಕರ ಮೂರ್ತಿ ಅವರನ್ನು ಕೆಲಸದಿಂದ ಬಿಡುಗಡೆ ಮಾಡಲಾಗಿದೆ ಎಂದು ಕಾಲೇಜು ಮೂಲಗಳು ಹೇಳಿವೆ.
More Stories
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಕ್ಷಣಾರ್ಧದಲ್ಲಿ 33 ಲಕ್ಷ ಕಳ್ಳತನ: ಓರ್ವ ಆರೋಪಿ ಬಂಧನ
ಚಾಮರಾಜನಗರದಲ್ಲಿ ಖಾಸಗಿ ಬಸ್ ಪಲ್ಟಿ: ಓರ್ವ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ