December 22, 2024

Newsnap Kannada

The World at your finger tips!

WhatsApp Image 2024 11 19 at 12.18.53 PM

ಸಚಿವ ಸ್ಥಾನ ನನ್ನ ಹಕ್ಕು, ಬೇಡಿಕೆಯಲ್ಲ: ನಿಖರ ಹೇಳಿಕೆ ನೀಡಿದ ‘ಕೈ’ ಶಾಸಕ ನರೇಂದ್ರ ಸ್ವಾಮಿ

Spread the love

ಮಂಡ್ಯ :ಕರ್ನಾಟಕದ ಕಾಂಗ್ರೆಸ್ ಶಾಸಕ ನರೇಂದ್ರ ಸ್ವಾಮಿ ಸಚಿವ ಸ್ಥಾನಕ್ಕೆ ಸಂಬಂಧಿಸಿದಂತೆ ಮತ್ತೆ ಸ್ಫೋಟಕ ಹೇಳಿಕೆ ನೀಡಿದ್ದು, ಅದು ತನ್ನ ಹಕ್ಕು ಎಂದು ಹಠದ ಮಾತು ಹೇಳಿದ್ದಾರೆ.

“ಇದು ನನ್ನ ಹಕ್ಕು, ಬೇಡಿಕೆ ಅಲ್ಲ. ನನ್ನ ಅರ್ಹತೆ, ಸೀನಿಯಾರಿಟಿ, ಹಾಗೂ ಪಕ್ಷದ ಬಗ್ಗೆ ತೋರಿದ ನಿಷ್ಠೆ ಇದಕ್ಕಾಗಿ ಸಾಕ್ಷಿಯಾಗಿದೆ. ನನ್ನ ಹಕ್ಕನ್ನು ಪ್ರಬಲವಾಗಿ ಪ್ರತಿಪಾದನೆ ಮಾಡುವ ದಿನ ಹತ್ತಿರವಾಗಿದೆ,” ಎಂದು ನರೇಂದ್ರ ಸ್ವಾಮಿ ಹೇಳಿದ್ದಾರೆ.

ಹೈಕಮಾಂಡ್ ಈ ಸಂಬಂಧ ತೀರ್ಮಾನ ಮಾಡಬೇಕು. ನನ್ನ ಕ್ಷೇತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರುವಾಗ ನನ್ನ ಹೆಸರನ್ನು ಸೂಚಿಸಿದ್ದರು,” ಎಂದು ಅವರು ಹೇಳಿದರು.

ನನ್ನ ಮೇಲೆ ಪದೇಪದೇ ರಾಜಕೀಯ ಅನ್ಯಾಯ ನಡೆಯುತ್ತಿದೆ. 1994ರಿಂದಲೂ ಈ ಸಮಸ್ಯೆ ಎದುರಿಸುತ್ತಿದ್ದೇನೆ,” ಎಂದಿದ್ದಾರೆ.

ರಾಜಕೀಯದಲ್ಲಿ ಸಂಘಟನೆಯಿಂದಲೇ ಮುಂದುವರಿದಿದ್ದೇನೆ. ಮಂಡ್ಯದಲ್ಲಿ ಕಾಂಗ್ರೆಸ್ ಬಲವಾಗಿ ನಿಂತಿರುವುದು ನನ್ನ ಶ್ರಮ,” ಎಂದು ತಿಳಿಸಿದರು.

HDK ಟೀಕೆ:
ಹೆಚ್.ಡಿ. ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರ ಬಿದ್ದೋಗುತ್ತದೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, “ಸರ್ಕಾರ ಬಿಳುತ್ತೆ ಎಂಬ ಊಹೆಗಳು ಹೊಸದಿಲ್ಲ. ಜೆ.ಎಚ್. ಪಾಟೀಲ್ ಅವರ ಕಾಲದಲ್ಲೂ ಇಂತಹ ಹೇಳಿಕೆಗಳು ಬಂದಿದ್ದವು,” ಎಂದು ತಿರಸ್ಕರಿಸಿದರು.

“ನಾನು ರೈತನ ಮಗನಾಗಿ, ವಿದ್ಯಾರ್ಥಿ ನಾಯಕರಾಗಿ ಆರಂಭಿಸಿದ ನನ್ನ ರಾಜಕೀಯದ ಹಾದಿ ನಿರಂತರವಾಗಿ ಅನ್ಯಾಯದಿಂದ ಕಲುಷಿತವಾಗಿದೆ. ಆದರೆ, ಈ ಬಾರಿ ನನ್ನ ಹಕ್ಕಿಗೆ ನ್ಯಾಯ ಸಿಗಲಿದೆ ಎಂದು ನಾನು ನಂಬಿದ್ದೇನೆ,” ಎಂದು ಸ್ಪಷ್ಟಪಡಿಸಿದರು.ಇದನ್ನು ಓದಿ –ರಾಜ್ಯಗಳಾದ್ಯಂತ `ED’ ದಾಳಿ: ಲಾಟರಿ ಕಿಂಗ್ ಮಾರ್ಟಿನ್‌ನ 12.41 ಕೋಟಿ ನಗದು ಜಪ್ತಿ

ನರೇಂದ್ರ ಸ್ವಾಮಿಯ ಈ ಹೇಳಿಕೆಗಳು ರಾಜ್ಯ ರಾಜಕೀಯದಲ್ಲಿ ಸಚಿವ ಸಂಪುಟ ವಿಸ್ತರಣೆ ಹಿನ್ನಲೆಯಲ್ಲಿ ಹೊಸ ಚರ್ಚೆಗಳನ್ನು ಹುಟ್ಟುಹಾಕಿವೆ.

Copyright © All rights reserved Newsnap | Newsever by AF themes.
error: Content is protected !!