ಶುದ್ದೀಕರಿಸಿದ ನೀರಿನ ಕಾರಂಜಿ ಉದ್ಘಾಟಿಸಿದ ಸಚಿವ ಎಸ್.ಟಿ.ಸೋಮಶೇಖರ್

Team Newsnap
1 Min Read

ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ನಿವೇದಿತಾ ನಗರ ಉದ್ಯಾನದಲ್ಲಿ ಶುದ್ದೀಕರಿಸಿದ ನೀರಿನಿಂದ ಕಾರ್ಯನಿರ್ವಹಿಸುವ ಕಾರಂಜಿಯನ್ನು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಶನಿವಾರ ಉದ್ಘಾಟಿಸಿದರು.

ಪ್ರಸ್ತುತ ವರ್ಷದ ಸ್ವಚ್ಚ ಸರ್ವೇಕ್ಷಣಾ- 2021 ನಿಂದ ಪ್ರಾರಂಭವಾಗಿದ್ದು, ಸದರಿ ಸ್ಪರ್ಧೆಯ ಮಾರ್ಗಸೂಚಿಯಂತೆ ವಾಟರ್+ ನಗರ ಎಂದು ಗರಿಮೆ
ಪಡೆಯಲು ಉದ್ದೇಶಿಸಿರುತ್ತದೆ.

ಆದ್ದರಿಂದ ಪ್ರಸಿದ್ಧ ಮೈಸೂರು ಮಹಾನಗರ ಪಾಲಿಕೆಯ ಕೆಸರೆ, ರಾಯನಕೆರೆ ಮತ್ತು ವಿದ್ಯಾರಣ್ಯಪುರಂ ಪ್ರದೇಶಗಳಲ್ಲಿರುವ ಒಟ್ಟು 157.65 ಎಂಎಲ್‌ಡಿ ಸಾಮರ್ಥ್ಯದ ತ್ಯಾಜ್ಯ ನೀರಿನ ಶುದ್ಧೀಕರಣ ಘಟಕಗಳಿಂದ ಬರುವ ಶುದ್ಧೀಕರಿಸಿದ ನೀರನ್ನು ಕೃಷಿ ಚಟುವಟಿಕೆ ಹಾಗೂ ಗಾಲ್ಫ್ ಕೋರ್ಸ್ ಗಳಿಗೆ ಸರಬರಾಜು ಮಾಡಿರುತ್ತದೆ.

water

ನಗರದ ಎಲ್ಲಾ ಕಾರಂಜಿಗಳಲ್ಲಿ ತ್ಯಾಜ್ಯ ನೀರಿನ ಶುದ್ಧೀಕರಣ ಘಟಕದಿಂದ ಬರುವ ಶುದ್ಧೀಕರಿಸಿದ ನೀರನ್ನು ಉಪಯೋಗಿಸಲಾಗುತ್ತದೆ.

ಕಾರ್ಯಕ್ರಮದಲ್ಲಿ ಶಾಸಕರಾದ ಜಿ.ಟಿ.ದೇವೇಗೌಡ, ಎಲ್.ನಾಗೇಂದ್ರ, ಮುಡಾ ಅಧ್ಯಕ್ಷರಾದ ಹೆಚ್.ವಿ.ರಾಜೀವ್, ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ವಲಯ ಆಯುಕ್ತ ಸತ್ಯಮೂರ್ತಿ ಅಧೀಕ್ಷಕ ಇಂಜಿನಿಯರ್ ರಂಗಯ್ಯ ಮತ್ತಿತರರು ಉಪಸ್ಥಿತರಿದ್ದರು.

Share This Article
Leave a comment