ಹಾಸನ: ಕಾಂಗ್ರೆಸ್ ಸಮಾವೇಶಕ್ಕೆ ತೆರಳುತ್ತಿದ್ದ ಕರ್ನಾಟಕ ರಾಜ್ಯದ ಸಚಿವ ಕೆ.ಎಚ್. ಮುನಿಯಪ್ಪ ಅವರ ಕಾರು ಅಪಘಾತಕ್ಕೀಡಾದ ಘಟನೆ ಸಂಭವಿಸಿದೆ. ಪ್ರಾಣಾಪಾಯ ಅಥವಾ ಗಂಭೀರ ಅನಾಹುತವೇನೂ ಸಂಭವಿಸಿಲ್ಲ ಎಂಬುದು ಸದ್ಯದ ಮಾಹಿತಿ.
ಹಾಸನ ತಾಲ್ಲೂಕಿನ ಶಾಂತಿಗ್ರಾಮ ಟೋಲ್ ಬಳಿ ಮುನಿಯಪ್ಪರ ಕಾರಿಗೆ ಹಿಂಬದಿಯಿಂದ ಮತ್ತೊಂದು ಕಾರು ಡಿಕ್ಕಿ ಹೊಡೆದಿದ್ದು, ಇದರಿಂದ ಕಾರು ಸಣ್ಣಪುಟ್ಟ ನಷ್ಟಕ್ಕೆ ಒಳಗಾಗಿದೆ. ಘಟನೆಯಲ್ಲಿ ಯಾರಿಗೂ ಯಾವುದೇ ಅಪಾಯವಾಗಿಲ್ಲ.
ಇದನ್ನು ಓದಿ – ಮುಂದಿನ 4 ದಿನಗಳಲ್ಲಿ ರಾಜ್ಯದ ಹಲವೆಡೆ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ
ಅಪಘಾತದ ನಂತರ, ಸಚಿವರು ಬೇರೆ ವಾಹನದಲ್ಲಿ ಹಾಸನದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸಮಾವೇಶಕ್ಕೆ ಪ್ರಯಾಣ ಮುಂದುವರಿಸಿದರು ಎಂದು ತಿಳಿದುಬಂದಿದೆ.
More Stories
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇತಿಹಾಸ ಸೃಷ್ಟಿಸಲಿದೆ: ಸಚಿವ ಚಲುವರಾಯಸ್ವಾಮಿ
ಸಿಎಂ ಪತ್ನಿಯ ನಿವೇಶನ ಹಗರಣ: ದೂರು ಹಿಂಪಡೆಯಲು ಆಮಿಷ ನೀಡಿದ ಆರೋಪ
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ರವಿಚಂದ್ರನ್ ಅಶ್ವಿನ್ ದಿಢೀರ್ ವಿದಾಯ