December 25, 2024

Newsnap Kannada

The World at your finger tips!

c c patil

ಸಚಿವ ಸಿ.ಸಿ ಪಾಟೀಲ್ ಕಾರು, ಬೈಕ್‌ಗೆ ಡಿಕ್ಕಿ- ಸಚಿವರ ಕಾಪಾಡಲು ಮುಂದಾದ ಪೊಲೀಸರು

Spread the love

ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ್ ಸಂಚಾರ ಮಾಡುತ್ತಿದ್ದ ಕಾರು ಬೈಕ್​​ಗೆ ಡಿಕ್ಕಿಯಾಗಿ ಸವಾರ ಗಾಯಗೊಂಡಿರುವ ಘಟನೆ ಮಂಗಳವಾರ ಮೈಸೂರಿನ ಬಂಬೂ ಬಜಾರ್ ಬಳಿ ನಡೆದಿದೆ.

ದ್ವಿಚಕ್ರ ವಾಹನಕ್ಕೆ ಸಚಿವರಿದ್ದ ಸರ್ಕಾರಿ ಕಾರು‌ ಡಿಕ್ಕಿಯಾಗಿತ್ತು. ಆದರೆ ಈ ವೇಳೆ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸದೆ ಸಚಿವರ ಕಾರಿನ ಮೇಲಿದ್ದ ಬಾವುಟ ತೆಗೆಯಲು ಸಿಬ್ಬಂದಿ ಮುಂದಾಗಿದ್ದರು ಎನ್ನಲಾಗಿದೆ.

ಸ್ಥಳೀಯರು ಸಚಿವರು ಹಾಗೂ ಕಾರು ಚಾಲಕನಿಗೆ ತರಾಟೆಗೆ ತೆಗೆದುಕೊಂಡಿದ್ದು, ಸ್ಥಳದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ಏರ್ಪಟ್ಟಿತ್ತು.

ಈ ಹಂತದಲ್ಲಿ ಮಧ್ಯ ಪ್ರವೇಶಿದ ಪೊಲೀಸರು ಕೂಡ ಕಾರನ್ನು ಸುರಕ್ಷಿತವಾಗಿ ಕಳುಹಿಸಲು ಮುಂದಾಗಿದ್ದರು.

ಇದರಿಂದ ಮತ್ತಷ್ಟು ಅಸಮಾಧಾನಗೊಂಡ ಸ್ಥಳೀಯರು ಪೊಲೀಸರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಸಚಿವರ ಜೊತೆಯೇ ಸ್ಥಳೀಯರು ಮಾತಿನ ಚಕಮಕಿ ನಡೆಸಿದ್ದು, ಪೊಲೀಸರು, ಸಚಿವರು ಹಾಗೂ ಸಿಬ್ಬಂದಿಗಳ ವರ್ತನೆಗೆ ಗರಂ ಆಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಕೊನೆಗೆ ಗಾಯಾಳು ಸವಾರನನ್ನು ತಮ್ಮ ವಾಹನದಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!