January 14, 2026

Newsnap Kannada

The World at your finger tips!

sogade

ಆರೋಗ್ಯದ ಗಣಿ ಸುಗಂಧಿ (ಸೊಗದೇ ಬೇರು)

Spread the love

ಕಾಡಿನ ಮಧ್ಯೆ ಇರುವ ಒಂದಷ್ಟು ಮೂಲಿಕೆಗಳು ಆರೋಗ್ಯವನ್ನು ವೃದ್ಧಿಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ. ಆಸ್ಪತ್ರೆಗಳಿಗೆ ತೆರಳಿದರೂ ಕಡಿಮೆಯಾಗದ ಒಂದಷ್ಟು ಆರೋಗ್ಯ ಸಮಸ್ಯೆಗಳಿಗೆ ಗಿಡ ಮೂಲಿಕೆಗಳು ಪರಿಹಾರ ನೀಡುತ್ತವೆ. ಕೆಲವೊಮ್ಮೆ ಆ ರೀತಿಯ ಮೂಲಿಕೆಗಳು ನಮ್ಮ ಮನೆಯ ಬಳಿಯೇ ಇದ್ದರೂ ನಮ್ಮ ಗಮನಕ್ಕೆ ಬಾರದೆ ಮೂಲೆ ಗುಂಪಾಗುತ್ತದೆ. ಅಂತಹ ಅನೇಕ ಗಿಡಮೂಲಿಕೆಗಳಲ್ಲಿ “ಸೊಗದೆ ಬೇರು” ಕೂಡ ಒಂದು. ಇದನ್ನು ಇಂಗ್ಲಿಷಿನಲ್ಲಿ “Indian sarsaparilla” ಎಂದು ಕರೆಯುತ್ತಾರೆ. ಪ್ರಕೃತಿ ನಮಗೆ ನೀಡಿದ ಅದ್ಭುತ ಗಿಡಮೂಲಿಕೆಗಳಲ್ಲಿ ಸುಗಂಧಿ(ನನ್ನಾರಿ) ಬೇರುಗಳು ಒಂದು.


ಇದು ಅಸಾಧಾರಣ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ನೈಸರ್ಗಿಕ ದೇಹ ಶೀತಕವಾಗಿದೆ ಮತ್ತು ಹಲವಾರು ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಆಯುರ್ವೇದದಲ್ಲಿ ತಲೆಮಾರುಗಳಿಂದ ಬಳಸಲಾಗುತ್ತದೆ
ಈ ಸೊಗದೆ ಬೇರು ಸಾಮಾನ್ಯವಾಗಿ ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ಬೆಟ್ಟ, ಗುಡ್ಡಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ತೆಳ್ಳಗಿರುವ ಬಳ್ಳಿ ಹಳ್ಳಿಯ ಜನರಿಗೆ ತೀರ ಪರಿಚಯವಿರುವ ವನಮೂಲಿಕೆ. ಎಲೆಗಳು ದಾಳಿಂಬೆ ಗಿಡದ ಎಲೆಗಳನ್ನು ಹೋಲುತ್ತದೆ ಮತ್ತು ಸ್ವಲ್ಪ ಉದ್ದವಾಗಿರುತ್ತವೆ. ಪ್ರತಿ ಎಲೆಯ ಮಧ್ಯೆ ಬಿಳಿ ನಾಮವಿರುವುದು. ಆದುದರಿದಂದಲೆ ಈ ಬಳ್ಳಿಗೆ ನಾಮದ ಬಳ್ಳಿಯೆಂದು ಕರೆಯುತ್ತಾರೆ. ಈ ಬಳ್ಳಿಯ ಬೇರುಗಳಿಗೆ ಸುಗಂಧವಿರುವುದು. ಆದುದರಿಂದಲೇ ಸುಗಂಧಿ ಬೇರು ಎಂದು ಸಹ ಕರೆಯುವರು. ಮರಗಿಡಗಳ ಬೇರನ್ನು ತುಂಡು ಮಾಡಿದಾಗ ಪರಿಮಳವುಳ್ಳ ಹಾಲು ಸೋರುತ್ತದೆ. ಬೇರುಗಳು ಭೂಮಿಯಲ್ಲಿ ಆಳವಾಗಿ ಇಳಿದಿರುತ್ತದೆ.

ಇಂದು ಆಹಾರ ವಸ್ತುಗಳಿಗೆ ನಾನಾ ರೀತಿಯ ಕ್ರಿಮಿನಾಶಕಗಳನ್ನು ಸಿಂಪಡಿಸಿ ರಾಸಾಯನಿಕಗಳನ್ನು ಬಳಸಿ ಬೆಳೆ ಬೆಳೆಯುತ್ತಿರುವುದರಿಂದ, ಅದರಲ್ಲಿನ ವಿಷ ಪದಾರ್ಥಗಳು ಆಹಾರ ಮುಖಾಂತರ ರಕ್ತದಲ್ಲಿ ಸೇರಿದ ರಕ್ತದ ಅಶುದ್ಧಿಗೆ ಕಾರಣವಾಗಿದೆ. ಇದರಿಂದ ವಿವಿಧ ದೋಷಗಳನ್ನು ಉಂಟುಮಾಡುತ್ತವೆ. ಅದರಲ್ಲೂ ಚರ್ಮವ್ಯಾಧಿ ತಲೆ ಕೂದಲು ಉದುರುವಿಕೆ, ನಿಶಕ್ತಿಗಳಿಗೆ ಕಾರಣವಾಗುತ್ತವೆ. ಈ ತೊಂದರೆಗಳ ನಿವಾರಣೆಯ ಗುಣ ಸೋಗದೆ ಬೇರೆ ನಲ್ಲಿದೆ.


ಸೊಗದೆ ಬೇರಿನ ಆರೋಗ್ಯಕರ ಗುಣಗಳು ಹಾಗೂ ಉಪಯೋಗಗಳು.

sogade 1

1) ಸೊಗದೆ ಬೇರಿನ ತೊಗಟೆಯನ್ನು ನುಣ್ಣಗೆ ಚೂರ್ಣ ಮಾಡಿ, ಭರಣಿಯಲ್ಲಿ ಶೇಖರಿಸಿಟ್ಟು 5 ಗ್ರಾಂ ಚೂರ್ಣವನ್ನು ಒಂದು ಬಟ್ಟಲು ನೀರಿನಲ್ಲಿ ಕದಡಿ, ಪ್ರತಿ ನಿತ್ಯ ಎರಡು ವೇಳೆ ಸೇವಿಸುವುದರಿಂದ ಕೇಶ ವೃದ್ಧಿಯಾಗಿ , ಕೂದಲು ಸೊಂಪಾಗಿ ಬೆಳೆಯತ್ತದೆ.

2) ಕೆಲವು ಬಾಣಂತಿಯರಲ್ಲಿ ತಿಂಗಾಳದರೂ ಎದೆಹಾಲು ಸರಿಯಾಗಿ ಉತ್ಪತ್ತಿಯಾಗಿರುವುದಿಲ್ಲ. ಇದಕ್ಕೆ ಸೊಗದೆ ಬೇರು ಉತ್ತಮ ಮನೆಮದ್ದಾಗಿದೆ. ಸೊಗದೆ ಬೇರನ್ನು ನೀಡಿದರೆ ಹಾಲಿನ ಉತ್ಪತ್ತಿಯಾಗುತ್ತದೆ.

3) ಆಹಾರದಲ್ಲಿನ ವ್ಯತ್ಯಾಸ, ನಿದ್ದೆಗೆಡುವುದು ಹೀಗೆ ಹಲವು ಕಾರಣಗಳಿಂದ ದೇಹದಲ್ಲಿ ಪಿತ್ತ ಉಂಟಾಗುತ್ತದೆ. ಇದಕ್ಕೆ ಸೊಗದೆ ಬೇರು ಬಹುಬೇಗನೆ ಪರಿಹಾರ ನೀಡುತ್ತದೆ. ಸೊಗದೆ ಬೇರಿನ ಕಷಾಯ ಸೇವಿಸಿದರೆ ಒಂದೆರಡು ದಿನಗಳಲ್ಲಿ ಪಿತ್ತ ಶಮನವಾಗುತ್ತದೆ.

4) ಸೊಗದೆ ಬೇರನ್ನು ಜಜ್ಜಿಕೊಂಡು ನೀರಿಗೆ ಹಾಕಿ ಚೆನ್ನಾಗಿ ಹಾಕಿ ಕುದಿಸಿ ಅದಕ್ಕೆ ಬೆಲ್ಲ , ಲಿಂಬುರಸ ಸೇರಿಸಿ ಸೇವಿಸಿದರೆ ಪಿತ್ತವನ್ನು ಕಡಿಮೆ ಮಾಡಬಹುದಾಗಿದೆ.

5) ಸೊಗದೆ ಬೇರು 20ಗ್ರಾಂ, ಹಸಿಯ ಅಮೃತಬಳ್ಳಿ 10ಗ್ರಾಂ, ಹುರಿದ ಜೀರಿಗೆ ಎರಡೂವರೆ ಗ್ರಾಂ ಮಂಜಿಷ್ಟವನ್ನು ಸೇರಿಸಿ, ಚೆನ್ನಾಗಿ ಕುಟ್ಟಿ ಎರಡು ಬಟ್ಟಲು ನೀರಿಗೆ ಹಾಕಿ ಕಷಾಯ ಮಾಡಿ 1/4 ಭಾಗ ಮಾಡಿ ಕುಡಿಯುವುದರಿಂದ
ಮೂತ್ರದಲ್ಲಿ ಉರಿ ಮತ್ತು ನೋವು ಕಡಿಮೆಯಾಗುತ್ತದೆ.

6) 50ಗ್ರಾಂ ಸೊಗದೆ ಬೇರು ಮತ್ತು 5ಗ್ರಾಂ ಕಾಳುಮೆಣಸಿನ ಪುಡಿ, ನಯವಾಗಿ ಕುಟ್ಟಿ ಚೂರ್ಣ ಮಾಡುವುದು. ದಿವಸಕ್ಕೆ ಒಂದೇ ವೇಳೆ ಬೆಳಗಿನ ಹೊತ್ತು ಮಾತ್ರ ಸೇವಿಸಿದಾಗ ಕಾಮಾಲೆ ರೋಗದಲ್ಲಿ ಗುಣ ಕಾಣಬಹುದು.

7) ನೀರಿನಲ್ಲಿ ಚೆನ್ನಾಗಿ ಅರೆದ ಬೇರನ್ನು ಆಮವಾತ,ಕೀಲು ನೋವುಗಳಿಲ್ಲಿ ಹಚ್ಚಲು, ನೋವು ನಿವಾರಣೆಯೊಂದಿಗೆ, ಉರಿಯೂ ಕೂಡ ಕಡಿಮೆಯಾಗುವುದು.

8) ಸೊಗದೆ ಬೇರನ್ನು ಚೆನ್ನಾಗಿ ಬಿಸಿಲಲ್ಲಿ ಒಣಗಿಸಿ ಪುಡಿ ಮಾಡಿ ಒಂದು ಭಾಗ ಪುಡಿಗೆ ನಾಲ್ಕು ಭಾಗ ನೀರನ್ನು ಹಾಕಿ ನಿಧಾನವಾಗಿ ಕುದಿಸಿ ಒಂದು ಭಾಗ ನೀರು ಉಳಿದಾಗ ಶೋಧಿಸಿ ರುಚಿಗೆ ತಕ್ಕಷ್ಟು ಬೆಲ್ಲ ಅಥವ ಸಕ್ಕರೆ ಪಾಕ ಮಾಡಿ ಕುದಿಸಿ ಇಟ್ಟುಕೊಂಡು ಶರಭತ್ತು ಮಾಡಿಕೊಳ್ಳಬಹುದು. ಸೊಗದೆ ಬೇರಿನ ಈ ಶರಬತ್ತು ದೇಹಕ್ಕೆ ತಂಪು ನೀಡಿ ಕಲುಷಿತ ರಕ್ತವನ್ನು ಶುದ್ಧೀಕರಿಸುತ್ತದೆ.

9) ವಾತ, ಪಿತ್ತ ಮತ್ತು ಕಫ ಎಂಬ ಮೂರು ದೋಷಗಳಿಗೆ ಚಿಕಿತ್ಸೆ ನೀಡಲು ಇದನ್ನು ಬಳಸಬಹುದು.

10) ಬೇರು ಮತ್ತು ತೊಗಟೆಯು ವಿವಿಧ ರೋಗಗಳ ಚಿಕಿತ್ಸೆಯಲ್ಲಿ ಉಪಯುಕ್ತವಾಗಿದೆ. ಹಸಿವಿನ ಕೊರತೆ, ದುರ್ಬಲಗೊಂಡ ಜೀರ್ಣಕ್ರಿಯೆ, ಜ್ವರ, ಚರ್ಮ ರೋಗಗಳು, ಹುಣ್ಣು, ಸಿಫಿಲಿಸ್, ಸಂಧಿವಾತ, ಗೌಟ್(gout), ಲ್ಯುಕೋರಿಯಾ(leucorrhoea),

11) ನನ್ನಾರಿ ಸಸ್ಯ ಕೂದಲು ಉದುರುವಿಕೆಗೆ ನೈಸರ್ಗಿಕ ಚಿಕಿತ್ಸೆಯಾಗಿದೆ. ಇದು ಹೊಸ ಕೂದಲು ಬೆಳವಣಿಗೆಗೆ ಪ್ರಯೋಜನವನ್ನು ನೀಡುತ್ತದೆ. ಇದು ನೆತ್ತಿಯ ಶಾಖವನ್ನು ಕಡಿಮೆ ಮಾಡುತ್ತದೆ ಮತ್ತು ಊತ, ತಲೆಹೊಟ್ಟು ಮತ್ತು ತುರಿಕೆಯಂತಹ ನೆತ್ತಿಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

12) ಸಂತಾನೋತ್ಪತ್ತಿ ವ್ಯವಸ್ಥೆಯ ಅನೇಕ ರೋಗಗಳನ್ನು ಗುಣಪಡಿಸುತ್ತದೆ. ಇದು ನಿಮ್ಮ ಆರೋಗ್ಯವನ್ನು ನೈಸರ್ಗಿಕವಾಗಿ ಕಾಪಾಡಿಕೊಳ್ಳಲು ಸಹಾಯ ಮಾಡುವ ಅತ್ಯುತ್ತಮ ನೈಸರ್ಗಿಕ ನಿರ್ವಿಶೀಕರಣ ಗಿಡಮೂಲಿಕೆಗಳಲ್ಲಿ ಒಂದಾಗಿದೆ.

13) ನನ್ನಾರಿ ಸಸ್ಯ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸುತ್ತದೆ ಮತ್ತು ಯಕೃತ್ತನ್ನು ಯಾವುದೇ ಹಾನಿಯಿಂದ ರಕ್ಷಿಸುತ್ತದೆ. ಇದು ದೇಹದ ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯ ಕಾರ್ಯವನ್ನು ಸುಧಾರಿಸುತ್ತದೆ.

14) ಇದು ರಕ್ತವನ್ನು ಶುದ್ಧೀಕರಿಸುವ ಗುಣಗಳನ್ನು ಹೊಂದಿರುವುದರಿಂದ, ಇದು ಚೇಳು ಮತ್ತು ಹಾವು ಕಡಿತ ಮತ್ತು ಇತರ ವಿಷಕಾರಿ ಕೀಟ ಪ್ರಕರಣಗಳಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡುತ್ತದೆ.

15) ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿರುವುದರಿಂದ, ಇದು ಸ್ತನ ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡುತ್ತದೆ

ಗುಡ್ಡಗಳಲ್ಲಿ ಹೆಚ್ಚಾಗಿ ಸಿಗುವ ಸೊಗದೆ ಬೇರಿನಲ್ಲಿ ಅನೇಕ ಆರೋಗ್ಯ ಗುಣಗಳಿವೆ. ಮಾರುಕಟ್ಟೆಯಲ್ಲಿ ಸೊಗದೆ ಬೇರಿನ ಸಿರಪ್‌ ಕೂಡ ದೊರೆಯುತ್ತದೆ. ಅದನ್ನು ತಂದು ಬಳಸಿ ಕೂಡ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬಹುದಾಗಿದೆ.ಇದನ್ನು ಓದಿ –NEET UG 2025: ಪರೀಕ್ಷೆಯ ವೇಳಾಪಟ್ಟಿ ಪ್ರಕಟ, ಈ ರೀತಿ ನೋಂದಣಿ ಮಾಡಿಕೊಳ್ಳಿ

sogade beru

ಮುನ್ನೆಚ್ಚರಿಕೆಗಳು ಗಮನಿಸಿ : ಆಯುರ್ವೇದದ ಲೇಖನಗಳು ಕೇವಲ ಆಯುರ್ವೇದದ ಒಳ್ಳೆಯತನವನ್ನು ಹಂಚಿಕೊಳ್ಳುವ ಮತ್ತು ನೈಸರ್ಗಿಕ ಮತ್ತು ಆರೋಗ್ಯಕರ ಜೀವನಶೈಲಿಯ ಬಗ್ಗೆ ಅರಿವು ಮೂಡಿಸುವ ಉದ್ದೇಶಕ್ಕಾಗಿ ಮಾತ್ರ, ಆದ್ದರಿಂದ, ನೀವೇ ಚಿಕಿತ್ಸೆ ನೀಡಲು ಯಾವುದನ್ನಾದರೂ ಬಳಸುವ ಮೊದಲು, ಔಷಧೀಯವಾಗಿ ಯಾವುದೇ ಬಳಸುವ ಮೊದಲು ಯಾವಾಗಲೂ ವೃತ್ತಿಪರರಿಂದ,ಆಯುರ್ವೇದ ಪಂಡಿತರ, ವೈದ್ಯಕೀಯ ವೈದ್ಯರನ್ನು, ಅನುಭವಿ ಹಿರಿಯರ, ಸಲಹೆಯನ್ನು ಪಡೆಯಲು ಮರೆಯದಿರಿ.

sowmya sanath

ಸೌಮ್ಯ ಸನತ್ ✍️.

error: Content is protected !!